ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ 600 ಸ್ಟಾಫ್ ನರ್ಸ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಸರ್ಕಾರ ಹಸಿರು ನಿಶಾನೆ ತೋರಿದೆ. ಇದು ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಸಿಹಿ ಸುದ್ದಿಯಾಗಿದೆ.
ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿರುವ ಆದೇಶದಲ್ಲಿ, ಸಾರ್ವಜನಿಕ ಆರೋಗ್ಯ ಸೇವೆಗಳು ವ್ಯತ್ಯಯವಾಗದಂತೆ ತಾತ್ಕಾಲಿಕ ಕ್ರಮವಾಗಿ ಖಾಲಿ ಇರುವ ಶುಶ್ರೂಷಾಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಭರ್ತಿ ಮಾಡಲು ಅನುಮತಿ ನೀಡಲಾಗಿದೆ.
600 ಸ್ಟಾಫ್ ನರ್ಸ್ ಹುದ್ದೆಗಳ ಭರ್ತಿ ಪ್ಲಾನ್:
- 1205 ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಹಾಗೂ 300 ಆರೋಗ್ಯ ನಿರೀಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಸರ್ಕಾರ ಅನುಮತಿ ನೀಡಿದೆ.
- ಇದರ ಜೊತೆಗೆ 400 ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಹಾಗೂ 400 ಫಾರ್ಮಸಿಸ್ಟ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಒಂದು ವರ್ಷಕ್ಕೆ ಮಾತ್ರ ಭರ್ತಿ ಮಾಡಲು ಅನುಮತಿ ನೀಡಲಾಗಿದೆ.
- ಇದೀಗ ತೀವ್ರ ಅವಶ್ಯಕತೆಯ ಹಿನ್ನೆಲೆಯಲ್ಲಿ 600 ಸ್ಟಾಫ್ ನರ್ಸ್ ಹುದ್ದೆಗಳ ಗುತ್ತಿಗೆ ನೇಮಕಾತಿಗೆ ಅನುಮತಿ ನೀಡಲಾಗಿದೆ.
ವೇತನ ವಿವರ:
- ಬೇಸಿಕ್ + ವಿಡಿಎ: ₹17,435
- EPF (13%): ₹2,267
- ESI (3.25%): ₹567
- ಒಟ್ಟು: ₹20,268
- ಸರ್ವಿಸ್ ಚಾರ್ಜ್ (2%): ₹405
- GST (18%): ₹3,721
- ಒಟ್ಟು ಸಂಬಳ: ಪ್ರತಿ ನರ್ಸ್‌ಗೆ ₹24,395
ಸರ್ಕಾರದ ನಿಬಂಧನೆಗಳು:
- ನೇರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ನಂತರ, ಗುತ್ತಿಗೆ ಹುದ್ದೆಗಳ ಸೇವೆ ರದ್ದುಗೊಳಿಸಲಾಗುವುದು.
- ಗುತ್ತಿಗೆ ಸಿಬ್ಬಂದಿಯನ್ನು ನೇಮಕ ಮಾಡುವಾಗ, ಭವಿಷ್ಯದ ನೇರ ನೇಮಕಾತಿಗೆ ಯಾವುದೇ ಕಾನೂನು ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು.
- ಹಳೆಯ ಗುತ್ತಿಗೆ ಅವಧಿಯ ಸೇವೆಯನ್ನು ಪರಿಗಣಿಸದೆ, ಹೊಸದಾಗಿ ನೇಮಕ ಮಾಡಿದಂತೆಯೇ ಪರಿಗಣಿಸಬೇಕು.
- ಜಿಲ್ಲಾವಾರು ಸಿಬ್ಬಂದಿ ಕೊರತೆಯ ಮಾಹಿತಿ ಹಾಗೂ ಹುದ್ದೆಗಳ ಅವಶ್ಯಕತೆಯ ವಿವರವನ್ನು ಆಯುಕ್ತರು ಸರ್ಕಾರಕ್ಕೆ ಸಲ್ಲಿಸಬೇಕು.
ಆರೋಗ್ಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗದಂತೆ ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ಸಿಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
CIBIL Score: ಗುಡ್ ನ್ಯೂಸ್; ಸಿಬಿಲ್ ಸ್ಕೋರ್ ಇಲ್ಲದೆಯೂ ಸಾಲ ಪಡೆಯಬಹುದು
