ಕುರಿ ಸಾಕಾಣಿಕೆ ಮತ್ತು ಇತರೆ ಯೋಜನೆಗಳಿಗೆ 1 ಲಕ್ಷ ರೂ. ವರೆಗೆ ಸಹಾಯಧನ & ಸಾಲ ಸೌಲಭ್ಯ | Self Employment Loan Scheme 2025 Apply Online Karnataka

By: ವಿಜಯಲಕ್ಷ್ಮೀ ಪೂಜಾರಿ

On: Sunday, August 31, 2025 6:18 PM

Self Employment Loan Scheme 2025 Apply Online Karnataka
Google News
Follow Us
Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವನ್ನು ನೀಡಲು ರಾಜ್ಯ ಸರ್ಕಾರವು ಸ್ವಯಂ ಉದ್ಯೋಗ ನೇರಸಾಲ ಯೋಜನೆಯ (Self Employment Loan) ಅಡಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Self Employment Loan Scheme 2025:

  • ಯೋಜನೆ: ಸ್ವಯಂ ಉದ್ಯೋಗ ನೇರಸಾಲ ಯೋಜನೆ
  • ಘಟಕ ವೆಚ್ಚ: 1 ಲಕ್ಷ ರೂ.
  • ಸಹಾಯಧನ: 50,000 ರೂ.
  • ಸಾಲ: 50,000 ರೂ. (ಶೇ. 4ರಷ್ಟು ಬಡ್ಡಿದರಲ್ಲಿ)
  • ವಯೋಮಿತಿ: ಅರ್ಜಿದಾರರು ಕನಿಷ್ಠ 18 ರಿಂದ ಗರಿಷ್ಠ 56 ವರ್ಷ ಮೀರಿರಬಾರದು.

ಸ್ವಯಂ ಉದ್ಯೋಗ ನೇರಸಾಲ ಯೋಜನೆ:

ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವತಿಯಿಂದ 2025-2026 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆರ್ಥಿಕ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಸ್ವಯಂ ಉದ್ಯೋಗ ನೇರಸಾಲ ಯೋಜನೆಯ ಅಡಿಯಲ್ಲಿ ಕುರಿ/ಹಂದಿ/ಮೊಲ ಸಾಕಾಣಿಕೆ, ಹಣ್ಣು ಮತ್ತು ತರಕಾರಿ, ಮೀನು ಮಾಂಸ ಮಾರಾಟ, ಇತ್ಯಾದಿ ಕಿರು ಆರ್ಥಿಕ ಚಟುವಟಿಕೆಗಳಿಗೆ ಈ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ (ನೇರಸಾಲ) ಯೋಜನೆಯಡಿ ಅರ್ಹರಿಂದ ಅರ್ಜಿ ಆಹ್ವಾನಿಸಿಲಾಗಿದೆ. ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ, 1 ಲಕ್ಷ ರೂ. ವರೆಗೆ ಸಹಾಯಧನ ಪಡೆದುಕೊಳ್ಳಬಹುದು.

ಸ್ವಯಂ ಉದ್ಯೋಗ ನೇರಸಾಲ ಸಹಾಯಧನ ಯೋಜನೆ:

  1. ನೇರಸಾಲ ಯೋಜನೆ:
    ಕಿರು ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ನಿಗಮ ವತಿಯಿಂದ ಸಹಾಯಧನ ಮತ್ತು ನೇರಸಾಲ ಮಂಜೂರು ಮಾಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
  2. ಕುರಿ ಸಾಕಾಣಿಕೆ ಯೋಜನೆ:
    ಕುರಿ ಸಾಕಾಣಿಕೆ ಉದ್ದೇಶಕ್ಕಾಗಿ ನಿಗಮಗಳಿಂದ ಸಹಾಯಧನ ಮತ್ತು ನೇರಸಾಲ ನೀಡುತ್ತಾರೆ.

ಈ ಮೇಲಿನ ಸ್ವಯಂ ಉದ್ಯೋಗ ಯೋಜನೆಯಡಿ ಘಟಕ ವೆಚ್ಚ ರೂ. 1 ಲಕ್ಷ, ಇದರಲ್ಲಿ 50,000 ರೂ. ಸಹಾಯಧನ ಮತ್ತು ಶೇ. 4 ರಷ್ಟು ಬಡ್ಡಿದರದಲ್ಲಿ 50,000 ರೂ. ಸಾಲ ಒದಗಿಸುತ್ತಾರೆ.

    ಅರ್ಜಿ ಸಲ್ಲಿಸಲು ಯಾರು ಅರ್ಹರು?

    ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಈ ಕೆಳಗಿನ ನಿಗಮಗಳ ವ್ಯಾಪ್ತಿಯಲ್ಲಿ ಬರುವ ಸಮುದಾಯದ ಫಲಾನುಭವಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

    • ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ
    • ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
    • ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ
    • ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗದು
    • ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ
    • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ
    • ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
    • ಕರ್ನಾಟಕ ಮೇದಾರ ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮ

    ಅರ್ಜಿ ಸಲ್ಲಿಸಲು ಅರ್ಹತೆಗಳು:

    • ಕರ್ನಾಟಕದ ನಿವಾಸಿಯಾಗಿರಬೇಕು
    • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು
    • ವಯಸ್ಸು 21 ರಿಂದ 60 ವರ್ಷದೊಳಗಿರಬೇಕು
    • ಅರ್ಜಿ ಸಲ್ಲಿಸುವವರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಯಲ್ಲಿ ಉದ್ಯೋಗಿ ಆಗಿರಬಾರದು
    • ಅರ್ಜಿದಾರರ ಅಥವಾ ಅವರ ಕುಟುಂಬಸ್ಥರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು
    • ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಭಾಗಕ್ಕೆ ರೂ 1.5 ಲಕ್ಷ ಹಾಗೂ ನಗರ ಪ್ರದೇಶದಲ್ಲಿರುವವರಿಗೆ ರೂ 2 ಲಕ್ಷಕ್ಕಿಂತ ಕಡಿಮೆ ಇರಬೇಕು
    • ವಿಕಲಚೇತನರು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ಪ್ರಮಾಣ ಪತ್ರ ಸಲ್ಲಿಸಬೇಕು

    ಬೇಕಾಗುವ ದಾಖಲೆಗಳು:

    • ಆಧಾರ್‌ ಕಾರ್ಡ್‌
    • ಪಡಿತರ ಚೀಟಿ
    • ಚುನಾವಣಾ ಗುರುತಿನ ಚೀಟಿ
    • ಜಾತಿ ಮತ್ತು ಆದಾಯ ಪ್ರಮಾಣಪತ್ರ
    • ಈ ಹಿಂದೆ ನಿಗಮದಿಂದ ಯಾವುದೇ ಯೋಜನೆಯಡಿಲ್ಲಿ ಸೌಲಭ್ಯ ಪಡೆದಿಲ್ಲವೆಂದು ಅರ್ಜಿದಾರರ ಸ್ವಯಂ ಘೋಷಣೆ
    • ಇತ್ತೀಚಿನ ಭಾವಚಿತ್ರ
    • ವಿಕಲಚೇತನರಾಗಿದ್ದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ಪ್ರಮಾಣ ಪತ್ರ ಸಲ್ಲಿಸುವುದು
    • ಯೋಜನಾ ವರದಿ / ದರಪಟ್ಟಿ

    Self Employment Loan Scheme 2025 ಪ್ರಮುಖ ದಿನಾಂಕಗಳು:

    • ಸಮಾಜ ಕಲ್ಯಾಣ ಇಲಾಖೆಯ ಅರ್ಜಿ ಆರಂಭ: 07-08-2025
    • ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅರ್ಜಿ ಆರಂಭ: 18-08-2025

    ಅರ್ಜಿ ಸಲ್ಲಿಸುವುದು ಹೇಗೆ?

    ಈ ಮೇಲಿನ ನಿಗಮದ ವ್ಯಾಪ್ತಿಯಲ್ಲಿ ಬರುವ ಅರ್ಹ ಅಭ್ಯರ್ಥಿಗಳು ಇಲಾಖೆ ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಸೇವಾ ಸಿಂಧು sevasindhu.karnataka.gov.in ಪೊರ್ಟಲ್ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು ಅಥವಾ ‘ಗ್ರಾಮ ಒನ್ʼ, ʼಕರ್ನಾಟಕ ಒನ್ʼ, ʼಬೆಂಗಳೂರು ಒನ್ʼ, ಸೇವಾ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಸಬಹುದು.

    Seva Sindhu Application Online Link 2025:

    ಆನ್‌ಲೈನ್‌ ಅರ್ಜಿ ಸಲ್ಲಿಕೆ ಲಿಂಕ್‌: ಇಲ್ಲಿ ಕ್ಲಿಕ್‌ ಮಾಡಿ
    ಅಧಿಕೃತ ವೆಬ್‌ಸೈಟ್:‌ sevasindhu.karnataka.gov.in

    2023-24 ಮತ್ತು 2024-25 ಸಾಲಿನಲ್ಲಿ ಈ ಮೇಲಿನ ನಿಗಮದಡಿ ಆನ್‌ಲೈನ್ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

    ವಿಷೇಶ ಸೂಚನೆಗಳು:

    • ನಿಗಮದ ನಿರ್ದೇಶಕ ಮಂಡಳಿ ವಿವೇಚನಾ ಕೋಟಾ ಅಥವಾ ಸರ್ಕಾರದ ಸಾಂಸ್ಥಿಕ ಕೋಟಾದಡಿ ಸ್ವೀಕರಿಸುವ ಅರ್ಜಿಗಳನ್ನು ಸಹ ಸೇವಾಸಿಂಧು ಪೊರ್ಟಲ್ ಮೂಲಕವೇ ಸಲ್ಲಿಸುವುದು.

    ಸಹಾಯವಾಣಿ: ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರುಗಳ ಕಛೇರಿ ಅಥವಾ ನಿಗಮಗಳ ವೆಬ್ ಸೈಟ್ ಅಥವಾ ಕಲ್ಯಾಣಮಿತ್ರ ಸಹಾಯವಾಣಿ ಸಂಖ್ಯೆ 9482-300-400 ಗೆ ಸಂಪರ್ಕಿಸಬಹುದು.

    ಹೈನುಗಾರಿಕೆ ಮತ್ತು ಇತರೆ ಯೋಜನೆಗಳಿಗಾಗಿ 4 ಲಕ್ಷ ರೂ. ಸಹಾಯಧನ‌

    ಪೊಲೀಸ್‌ ಕಾನ್ಸ್‌ಟೇಬಲ್‌‌ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ

    Telegram Group Join Now
    WhatsApp Group Join Now

    Leave a Comment