ಪೊಲೀಸ್‌ ಕಾನ್ಸ್‌ಟೇಬಲ್‌‌ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ | Police Constable Recruitment Free Coaching Karnataka 2025

By: ವಿಜಯಲಕ್ಷ್ಮೀ ಪೂಜಾರಿ

On: Thursday, August 28, 2025 8:01 PM

Police Constable Recruitment Free Coaching Karnataka 2025
Google News
Follow Us
Telegram Group Join Now
WhatsApp Group Join Now

ನೀವು ಕೂಡ ಪೊಲೀಸ್‌ ಕಾನ್ಸ್‌ಟೇಬಲ್‌‌ ಉಚಿತ ತರಬೇತಿಗಾಗಿ ಅರ್ಜಿ ಸಲ್ಲಿಸಬೇಕಾ..? ಊಟ ವಸತಿಯೊಂದಿಗೆ ಪರೀಕ್ಷಾ ಪೂರ್ವ ತರಬೇತಿ (Free Coaching) ನೀಡಲು ಆನ್‌ಲೈನ್‌ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

2025-26ನೇ ಸಾಲಿನಲ್ಲಿ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ Police Constable ಪರೀಕ್ಷಾ ಪೂರ್ವ ತರಬೇತಿ ನೀಡಲು ಕರ್ನಾಟಕದ ನಾಲ್ಕು ಕಂದಾಯ ವಿಭಾಗಗಳಲ್ಲಿ ಪ್ರತ್ಯೇಕವಾಗಿ 60 ದಿನಗಳ ಊಟ ವಸತಿಯುತ ತರಬೇತಿ ನೀಡುವುದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲು ಉದ್ದೇಶಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ಉಚಿತ ತರಬೇತಿಗೆ ಸಂಬಂಧಿಸಿದಂತೆ ತರಬೇತಿ ವಿವರ, ತರಬೇತಿ ಅವಧಿ, ಅರ್ಜಿ ಸಲ್ಲಿಕೆ ವೆಬ್ʼಸೈಟ್ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂತಾದ ವಿವರಗಳು ಈ ಕೆಳಗಿಂತೆ ನೀಡಲಾಗಿದೆ.

Police Constable Recruitment Free Coaching 2025:

ವಿದ್ಯಾರ್ಹತೆ:
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಮಾನ್ಯತೆ ಪಡೆದ ಅಂಗೀಕೃತ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಪಾಸಾಗಿರಬೇಕು.

ವಯೋಮಿತಿ: ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷವಾಗಿರಬೇಕು ಗರಿಷ್ಠ ವಯೋಮಿತಿ 26 ವರ್ಷದೊಳಗಿರಬೇಕು.

ಅಭ್ಯರ್ಥಿಯ ಸಾಮಾನ್ಯ ಅರ್ಹತೆ:

  1. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
  2. ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು
  3. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗಧಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.

ವಾರ್ಷಿಕ ಆದಾಯ: ಅರ್ಜಿದಾರರ ಕುಟುಂಬದ ಎಲ್ಲಾ ಮೂಲಗಳ ವಾರ್ಷಿಕ ಆದಾಯ ರೂ. 5 ಲಕ್ಷ ಮೀರಿರಬಾರದು.

ಎತ್ತರ: ಪುರುಷರಿಗೆ ಕನಿಷ್ಠ 168 ಸೆಂ.ಮೀ ಮಹಿಳೆಯರಿಗೆ ಕನಿಷ್ಠ 157 ಸೆಂ.ಮೀ
ತೂಕ: (ಮಹಿಳೆಯರಿಗೆ) ಕನಿಷ್ಠ 45 ಕೆ.ಜಿ
ಎದೆ ಸುತ್ತಳತೆ: (ಪುರುಷರಿಗೆ) ಕನಿಷ್ಠ 86 ಸೆಂ.ಮೀ

ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ದೈಹಿಕ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಯಾವ ತರಬೇತಿ ನೀಡುತ್ತಾರೆ..?:
ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಕೆಳಗಿನ ತರಬೇತಿಗಳು ಒಳಗೊಂಡಿರುತ್ತದೆ.

  1. ದೈಹಿಕ ಚಟುವಟಿಕೆಗಳು – ಓಟ, ಎತ್ತರ ಜಿಗಿತ, ಶಾಟ್‌ಪುಟ್
  2. ಡ್ರಿಲ್
  3. ತರಗತಿಯ ತರಬೇತಿ

Police Constable Free Coaching Online Application Link:

ಆನ್‌ಲೈನ್‌ ಅರ್ಜಿ ಸಲ್ಲಿಕೆ ಲಿಂಕ್‌: ಅರ್ಜಿ ಸಲ್ಲಿಸಿ
ಅಧಿಕೃತ ವೆಬ್‌ಸೈಟ್:‌ igccd.karnataka.gov.in

PC Free Coaching ಕೊನೆಯ ದಿನಾಂಕ:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22-07-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-08-2025 ಸಂಜೆ 06 PM

ಹೈನುಗಾರಿಕೆ ಮತ್ತು ಇತರೆ ಯೋಜನೆಗಳಿಗಾಗಿ 4 ಲಕ್ಷ ರೂ. ಸಹಾಯಧನ‌

Telegram Group Join Now
WhatsApp Group Join Now

Leave a Comment