Police Constable ನೇಮಕಾತಿ ಪರೀಕ್ಷಾ ಪೂರ್ವ ಉಚಿತ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. Police Constable Free Coaching 2025 ಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಹುಬುದು.
2025-26 ನೇ ಸಾಲಿನಲ್ಲಿ ವಸತಿಯುತ 60 ದಿನಗಳ Police Constable ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡುವುದಕ್ಕಾಗಿ ಅರ್ಹ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.
Police Constable Free Coaching 2025 ಅರ್ಹತೆಗಳು:
ಪೊಲೀಸ್ ಕಾನ್ಸ್‌ಟೇಬಲ್ ಉಚಿತ ತರಬೇತಿಗೆ ಸಂಬಂಧಿಸಿದಂತೆ ತರಬೇತಿ ವಿವರ, ತರಬೇತಿ ಅವಧಿ, ಅರ್ಜಿ ಸಲ್ಲಿಕೆ ವೆಬ್ʼಸೈಟ್ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂತಾದ ವಿವರಗಳು ಈ ಕೆಳಗಿಂತೆ ನೀಡಲಾಗಿದೆ.
ವಿದ್ಯಾರ್ಹತೆ: ಮಾನ್ಯತೆ ಪಡೆದ ಅಂಗೀಕೃತ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ: ಅರ್ಜಿ ಸಲ್ಲಿಸುವ ಅಂತಿಮ ದಿನಾಂಕದೊಳಗೆ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷವಾಗಿರಬೇಕು ಗರಿಷ್ಠ ವಯೋಮಿತಿ 27 ವರ್ಷದೊಳಗಿರಬೇಕು.
ಅಭ್ಯರ್ಥಿಯ ಸಾಮಾನ್ಯ ಅರ್ಹತೆ:
- ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
- ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ).
- ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರಿಯಲ್ಲಿರುವ ಅಭ್ಯರ್ಥಿಗಳು ಅರ್ಹರಿರುವುದಿಲ್ಲ.
ವಾರ್ಷಿಕ ಆದಾಯ: ಅರ್ಜಿದಾರರ ಕುಟುಂಬದ ಎಲ್ಲಾ ಮೂಲಗಳ ವಾರ್ಷಿಕ ಆದಾಯ ರೂ. 8 ಲಕ್ಷ ಮೀರಿರಬಾರದು.

Police Constable Free Coaching Application Link:
ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್: ಅರ್ಜಿ ಸಲ್ಲಿಸಿ
ಅಧಿಕೃತ ವೆಬ್‌ಸೈಟ್: dom.karnataka.gov.in
PC Free Coaching 2025 ಕೊನೆಯ ದಿನಾಂಕ:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22-09-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-10-2025
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಜಿಲ್ಲಾ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಸಹಾಯವಾಣಿ ಸಂಖ್ಯೆ: 8277799990 ಇವರನ್ನು ಸಂಪರ್ಕಿಸಬಹುದು.
CIBIL Score: ಗುಡ್ ನ್ಯೂಸ್; ಸಿಬಿಲ್ ಸ್ಕೋರ್ ಇಲ್ಲದೆಯೂ ಸಾಲ ಪಡೆಯಬಹುದು





