ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು (OMCs) 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಇಳಿಕೆ (LPG Price Cut) ಮಾಡುವುದಾಗಿ ಘೋಷಿಸಿವೆ. ಪರಿಷ್ಕೃತ ಬೆಲೆ ಸೆಪ್ಟೆಂಬರ್ 1 ಅನ್ವಯವಾಗುವಂತೆ ಜಾರಿಯಾಗಲಿದೆ.
ಪ್ರತಿ ತಿಂಗಳಿನಂತೆ ಈ ತಿಂಗಳು ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕೃರಣೆ ಮಾಡಲಾಗಿದ್ದು, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 51.50 ರೂ. ಇಳಿಕೆ ಇಳಿಕೆ ಮಾಡಲಾಗಿದೆ. ಇದರಿಂದ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಆಹಾರೋದ್ಯಮಗಳಿಗೆ ಸ್ವಲ್ಪ ಮಟ್ಟಿನ ನೆರವು ದೊರೆಯಲಿದೆ.
LPG Price Cut September 2025:
ಪರಿಷ್ಕೃತ ದರ ಪ್ರಕಾರ, ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 51.50 ರೂ. ಕಡಿಮೆ ಮಾಡಲಾಗಿದ್ದು, ಈಗ ₹1,653 ಕ್ಕೆ ದೊರೆಯಲಿದೆ. ಕಂಪನಿಗಳ ಮೂಲಗಳು ಹೇಳುವಂತೆ, ಜಾಗತಿಕ ಇಂಧನ ಬೆಲೆ ಮತ್ತು ಇನ್‌ಪುಟ್ ವೆಚ್ಚಗಳ ಆಧಾರದ ಮೇಲೆ ತೈಲ ಕಂಪನಿಗಳು ಪ್ರತೀ ತಿಂಗಳು ಮಾಡುವ ದರ ಪರಿಷ್ಕರಣೆಯ ಭಾಗವಾಗಿಯೇ ಈ ಇಳಿಕೆ ನಡೆದಿದೆ.
ಪರಿಷ್ಕೃತ ದರ ಪ್ರಕಾರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಈಗ ₹1,580 ಕ್ಕೆ ದೊರೆಯಲಿದೆ. ಹಿಂದಿನ ದರ ₹1,631.50 ಆಗಿತ್ತು. ಉದ್ಯಮ ಮೂಲಗಳು ಹೇಳುವಂತೆ, ಜಾಗತಿಕ ಇಂಧನ ಬೆಲೆ ಮತ್ತು ಇನ್‌ಪುಟ್ ವೆಚ್ಚಗಳ ಆಧಾರದ ಮೇಲೆ ತೈಲ ಕಂಪನಿಗಳು ಪ್ರತೀ ತಿಂಗಳು ಮಾಡುವ ದರ ಪರಿಷ್ಕರಣೆಯ ಭಾಗವಾಗಿಯೇ ಈ ಇಳಿಕೆ ನಡೆದಿದೆ.
ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ:
ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ₹51.50 ಇಳಿಕೆಯ ನಂತರ ಈಗ ₹1,653 ಆಗಿದೆ.
- 14.2 ಕೆಜಿ ಗೃಹ ಸಿಲಿಂಡರ್: ₹855.50 (ಬದಲಾವಣೆ ಇಲ್ಲ)
- 5 ಕೆಜಿ ಗೃಹ ಸಿಲಿಂಡರ್: ₹318.50
- 47.5 ಕೆಜಿ ವಾಣಿಜ್ಯ ಸಿಲಿಂಡರ್: ₹4,129 (₹127 ಇಳಿಕೆ)
ಪ್ರಮುಖ ನಗರಗಳಲ್ಲಿನ ವಾಣಿಜ್ಯ ಎಲ್‌ಪಿಜಿ ದರ:
- ಕೋಲ್ಕತ್ತಾ: ₹1,684
- ಮುಂಬೈ: ₹1,531.50
- ಚೆನ್ನೈ: ₹1,738
ಗೃಹ ಬಳಕೆಯ ದರದಲ್ಲಿ ಯಾವುದೇ ಬದಲಾಗಿಲ್ಲ:
ಮನೆಗಳಲ್ಲಿ ಅಡುಗೆಗೆ ಬಳಸುವ 14.2 ಕೆಜಿ ಗೃಹ ಎಲ್‌ಪಿಜಿ ಸಿಲಿಂಡರ್ ಬೆಲೆ ₹855.50 ಇದ್ದು, ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ದೇಶದಾದ್ಯಂತ ಈ ದರ ಯಥಾಸ್ಥಿತಿಯಲ್ಲಿದೆ.
ಪ್ರಮುಖ ನಗರಗಳಲ್ಲಿನ 14.2 ಕೆಜಿ ಗೃಹ ಬಳಕೆಯ ಸಿಲಿಂಡರ್ ದರಗಳು:
- ದೆಹಲಿ: ₹853
- ಚೆನ್ನೈ: ₹868.50
- ಕೋಲ್ಕತ್ತಾ: ₹879
- ಮುಂಬೈ: ₹852.50
ವ್ಯಾಪಾರಿಗಳಿಗೆ ತಾತ್ಕಾಲಿಕ ನೆಮ್ಮದಿ:
ವಾಣಿಜ್ಯ ಎಲ್‌ಪಿಜಿ ದರ ಇಳಿಕೆಯಿಂದಾಗಿ ಹೋಟೆಲ್‌ಗಳು, ತಿಂಡಿ ತಿನಿಸು ಅಂಗಡಿಗಳು, ಢಾಬಾಗಳು ಮತ್ತು ಇತರ ಸಣ್ಣ ಪಟ್ಟು ಆಹಾರ ಮಾರಾಟಗಾರಿಗೆ ವೆಚ್ಚ ಕಡಿಮೆ ಮಾಡಲು ಸಹಕಾರಿಯಾಗಲಿದೆ. ಉದ್ಯಮ ವಲಯದವರ ಅಭಿಪ್ರಾಯದಲ್ಲಿ, “ದರ ಇಳಿಕೆ ತುಂಬಾ ದೊಡ್ಡ ಮಟ್ಟದಲ್ಲಿಲ್ಲ. ಆದರೆ ನಗರ ಪ್ರದೇಶಗಳಲ್ಲಿ ವಾಣಿಜ್ಯ ಎಲ್‌ಪಿಜಿ ಮೇಲೆ ಹೆಚ್ಚು ಅವಲಂಬನೆ ಇರುವ ಹೋಟೆಲ್‌ಗಳು ಮತ್ತು ಆಹಾರ ವ್ಯವಹಾರಗಳಿಗೆ ಇದು ಕೆಲ ಮಟ್ಟಿನ ಕಾರ್ಯಾಚರಣೆ ವೆಚ್ಚದ ಭಾರವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ,” ಎಂದು ಹೇಳಿದ್ದಾರೆ.
ಬೆಲೆ ಪರಿಷ್ಕರಣೆ ಪ್ರಕ್ರಿಯೆ:
ಎಲ್‌ಪಿಜಿ ದರಗಳನ್ನು ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳು ಪರಿಷ್ಕರಿಸುತ್ತವೆ. ಇದಕ್ಕೆ ಅಂತರರಾಷ್ಟ್ರೀಯ ಇಂಧನ ಮಾರುಕಟ್ಟೆಯ ಬೆಲೆ, ಕಚ್ಚಾ ತೈಲದ ವೆಚ್ಚ ಮತ್ತು ವಿದೇಶಿ ವಿನಿಮಯ ದರಗಳ ಏರಿಳಿತ ಪ್ರಮುಖ ಕಾರಣವಾಗುತ್ತದೆ. ಸಾಮಾನ್ಯವಾಗಿ ವಾಣಿಜ್ಯ ಸಿಲಿಂಡರ್ ದರಗಳಲ್ಲಿ ಹೆಚ್ಚು ಬದಲಾವಣೆ ಆಗುತ್ತವೆ, ಗೃಹ ಬಳಕೆಯ ಸಿಲಿಂಡರ್ ದರವು ಸ್ಥಿರವಾಗಿರುತ್ತದೆ.