ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸಹಕಾರಿಯಾಗಲೆಂದು ಜೀವನ ವಿಮಾ ನಿಗಮವು LIC Golden Jubilee Scholarship Scheme 2025-26 ಅನ್ನು ಆರಂಭಿಸಿದೆ. ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆಂದು ಅವರ ಶೈಕ್ಷಣಿಕ ಜೀವನ ಸುಗಮವಾಗಲಿ ಎಂಬ ಕಾರಣಕ್ಕೆ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ – LIC Golden Jubilee Scholarship ಘೋಷಿಸಿದೆ.
LIC Golden Jubilee Scholarship 2025:
ಎಲ್‌ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿವೇತನ ಯೋಜನೆಯಡಿ, ಸರ್ಕಾರಿ ಅಥವಾ ಖಾಸಗಿ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ರಾಷ್ಟ್ರೀಯ ವೃತ್ತಿಪರ ತರಬೇತಿ ಪರಿಷತ್ತಿಗೆ (NCVT) ಸಂಯೋಜಿತವಾಗಿರುವ ಔದ್ಯೋಗಿಕ ತರಬೇತಿ ಸಂಸ್ಥೆಗಳು (ITI) ಅಥವಾ ಕೇಂದ್ರಗಳಲ್ಲಿ ತಾಂತ್ರಿಕ/ವೃತ್ತಿಪರ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುವವರಿಗೆ ವಿದ್ಯಾರ್ಥಿವೇತನ ನೀಡಲಾಗುವುದು. ಈ ಯೋಜನೆಯು ಸಾಮಾನ್ಯ ವಿದ್ಯಾರ್ಥಿವೇತನ ಮತ್ತು ಬಾಲಕಿಯರಿಗೆ ವಿಶೇಷ ವಿದ್ಯಾರ್ಥಿವೇತನ ಎಂಬ ಎರಡು ವಿಭಾಗಗಳನ್ನು ಒಳಗೊಂಡಿದೆ ಎಂದು LIC ಯು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಯೋಜನೆಯನ್ನು 2006 ರಲ್ಲಿ LIC ತನ್ನ ಗೋಲ್ಡನ್ ಜೂಬಿಲಿ ವರ್ಷಾಚರಣೆ ಸಂದರ್ಭದಲ್ಲಿ ಪ್ರಾರಂಭಿಸಿದ್ದು, ಆಗಿನಿಂದ ಅನೇಕ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ನೆರವಾಗಿದೆ. ಈಗ 2025-26 ಆವೃತ್ತಿಯಲ್ಲಿಯೂ ಸಹ ಹೆಚ್ಚಿನ ವಿದ್ಯಾರ್ಥಿಗಳಿಗೆ ತಲುಪುವ ಗುರಿ ಹೊಂದಲಾಗಿದ್ದು, ಆರ್ಥಿಕ ಅಡಚಣೆಗಳಿಂದ ಶಿಕ್ಷಣ ವಂಚಿತರಾಗದಂತೆ ತಡೆಯಲು ಈ ಯೋಜನೆ ಪ್ರಮುಖ ಪಾತ್ರವಹಿಸುತ್ತಿದೆ.
LIC Golden Jubilee Scholarship ಅರ್ಹತೆಗಳು:
1) LIC General Scholarship 2025:
A] LIC Degree Scholarship 2025:
- 12th / Diploma ಪಾಸಾದ ವಿದ್ಯಾರ್ಥಿಗಳು (2022-23, 2023-24, 2024-25 ರಲ್ಲಿ) ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
- 2025-26 ಶೈಕ್ಷಣಿಕ ವರ್ಷದಲ್ಲಿ ಈ ಕೆಳಗಿನ ಕೋರ್ಸ್‌ಗಳಲ್ಲಿ ಮೊದಲ ವರ್ಷದ ಪ್ರವೇಶ ಪಡೆದಿರಬೇಕು:
- Medicine (MBBS, BAMS, BHMS, BDS)
- Engineering (BE, BTech, BArch)
- Graduation (ಯಾವುದೇ ವಿಭಾಗ)
- Integrated Courses
- Diploma, Vocational Courses
- ITI Courses (Govt. ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ)
- ಪೋಷಕರ ವಾರ್ಷಿಕ ಆದಾಯ ₹4.5 ಲಕ್ಷ ಮೀರಬಾರದು.
- ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡುತ್ತಾರೆ.
B] After 10th LIC Scholarship 2025:
- SSLC ಅಥವಾ ತತ್ಸಮಾನ ಪರೀಕ್ಷೆ ಪಾಸಾದವರು (2022-23, 2023-24, 2024-25ರಲ್ಲಿ) ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
- 2025-26 ರಲ್ಲಿ ಮೊದಲ ವರ್ಷದ ವೃತ್ತಿಪರ ಶಿಕ್ಷಣ/Diploma/ITI ಕೋರ್ಸ್‌ಗಳಲ್ಲಿ ಪ್ರವೇಶ ಪಡೆದಿರಬೇಕು.
- ಪೋಷಕರ/ಗಾರ್ಡಿಯನ್‌ಗಳ ವಾರ್ಷಿಕ ಆದಾಯ ₹4.5 ಲಕ್ಷ ಮೀರಬಾರದು.
- ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡುತ್ತಾರೆ.
2) LIC Special Scholarship for Girl Child:
- ಹೆಣ್ಣುಮಕ್ಕಳಿಗೆ ಮಾತ್ರ ಅನ್ವಯ.
- SSLC ಅಥವಾ ತತ್ಸಮಾನ ಪರೀಕ್ಷೆ ಪಾಸಾದವರು (2022-23, 2023-24, 2024-25ರಲ್ಲಿ) ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
- 2025-26ರಲ್ಲಿ ಮೊದಲ ವರ್ಷದ Intermediate/10 + 2 Pattern, ವೃತ್ತಿಪರ ಶಿಕ್ಷಣ/Diploma/ITI (2 ವರ್ಷಗಳ ಕೋರ್ಸ್‌ಗಳು) ಪ್ರವೇಶ ಪಡೆದಿರಬೇಕು.
- ಪೋಷಕರ/ಗಾರ್ಡಿಯನ್‌ಗಳ ವಾರ್ಷಿಕ ಆದಾಯ ₹4.5 ಲಕ್ಷ ಮೀರಬಾರದು.
- ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡುತ್ತಾರೆ.
- ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿನಿಯರಿಗೆ ವಿಶೇಷ ಆದ್ಯತೆ ನೀಡುತ್ತಾರೆ.
LIC GJF Scholarship 2025 ಮೊತ್ತ:
A] Degree Scholarship Amount:
1️⃣ ವೈದ್ಯಕೀಯ ಕ್ಷೇತ್ರ (MBBS, BAMS, BHMS, BDS):
- ವಾರ್ಷಿಕ ಮೊತ್ತ: ₹40,000/-
- ಪಾವತಿ: ಪ್ರತಿ ವರ್ಷ ಎರಡು ಕಂತುಗಳಲ್ಲಿ ₹20,000 + ₹20,000 ನೀಡುತ್ತಾರೆ.
2️⃣ ಎಂಜಿನಿಯರಿಂಗ್ (BE, BTech, BArch):
- ವಾರ್ಷಿಕ ಮೊತ್ತ: ₹30,000/-
- ಪಾವತಿ: ಪ್ರತಿ ವರ್ಷ ಎರಡು ಕಂತುಗಳಲ್ಲಿ ₹15,000 + ₹15,000 ನೀಡುತ್ತಾರೆ
3️⃣ ಸಾಮಾನ್ಯ ಪದವಿ / ಇಂಟಿಗ್ರೇಟೆಡ್ / ಡಿಪ್ಲೋಮಾ / ವೊಕೆಷನಲ್ / ITI:
- ವಾರ್ಷಿಕ ಮೊತ್ತ: ₹20,000/-
- ಪಾವತಿ: ಪ್ರತಿ ವರ್ಷ 2 ಕಂತುಗಳಲ್ಲಿ ₹10,000 + ₹10,000 ನೀಡುತ್ತಾರೆ
B] After 10th LIC Scholarship Amount:
- ವಾರ್ಷಿಕ ಮೊತ್ತ: ₹20,000/- ಪ್ರತಿ ವರ್ಷ
- ಪಾವತಿ: 2 ಕಂತುಗಳಲ್ಲಿ ₹10,000 + ₹10,000 ನೀಡುತ್ತಾರೆ
B] Special Scholarship for Girl Child (Class 10 ನಂತರ)
- ವಾರ್ಷಿಕ ಮೊತ್ತ: ₹15,000/-
- ಪಾವತಿ: ಪ್ರತಿ ವರ್ಷ 2 ಕಂತುಗಳಲ್ಲಿ ₹7,500 + ₹7,500
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:
- ಅಂಕಪಟ್ಟಿಗಳು
- ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್ / ಗುರುತು ಚೀಟಿ
- ಬ್ಯಾಂಕ್ ಖಾತೆ ವಿವರಗಳು
ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 22-09-2025
LIC Golden Jubilee Scholarship 2025 ಪ್ರಮುಖ ಲಿಂಕ್ ಗಳು:
ಅಧಿಸೂಚನೆ: ಡೌನ್‌ಲೋಡ್
ಅರ್ಜಿ ಸಲ್ಲಿಕೆ ಲಿಂಕ್: ಅರ್ಜಿ ಸಲ್ಲಿಸಿ
ಅಧಿಕೃತ ವೆಬ್‌ಸೈಟ್: licindia.in
- ಅರ್ಜಿ ಸಲ್ಲಿಸುವ ಮೊದಲು ಎಲ್‌ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿವೇತನ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸಿ.
CIBIL Score: ಗುಡ್ ನ್ಯೂಸ್; ಸಿಬಿಲ್ ಸ್ಕೋರ್ ಇಲ್ಲದೆಯೂ ಸಾಲ ಪಡೆಯಬಹುದು