Krishi Bhagya Scheme: ಕೃಷಿ ಭಾಗ್ಯ ಯೋಜನೆ 2025-26: ರೈತರಿಂದ ಅರ್ಜಿ ಆಹ್ವಾನ

By: ವಿಜಯಲಕ್ಷ್ಮೀ ಪೂಜಾರಿ

On: Thursday, September 4, 2025 6:10 PM

Krishi Bhagya Scheme Karnataka 2025
Google News
Follow Us
Telegram Group Join Now
WhatsApp Group Join Now

ಬೆಂಗಳೂರು: 2025-26 ನೇ ಸಾಲಿನಲ್ಲಿ ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಗೆ (Krishi Bhagya Scheme) ಅರ್ಜಿ ಆಹ್ವಾನಿಸಿದೆ. ಈ ಯೋಜನೆಯಡಿ ಎಲ್ಲಾ ವರ್ಗದ ಅರ್ಹ ರೈತರು ಕೃಷಿ ಹೊಂಡ, ತಂತಿಬೇಲಿ, ಟಾರ್ಪಲ್ ಹೊದಿಕೆ, ಕ್ಷೇತ್ರ ಬದು, ಡೀಸೆಲ್ ಇಂಜಿನ್ ಹಾಗೂ ತುಂತುರು ನೀರಾವರಿ ಘಟಕಗಳನ್ನು ಪ್ಯಾಕೇಜ್ ಮಾದರಿಯಲ್ಲಿ ಸಹಾಯಧನ ನೀಡುತ್ತಾರೆ. ಅರ್ಹ ರೈತರು ಅರ್ಜಿ ಸಲ್ಲಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಪ್ರಕಟಣೆಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

ಸೂಕ್ಷ್ಮ ನೀರಾವರಿ ಯೋಜನೆ:

  • ತುಂತುರು ಮತ್ತು ಹನಿ ನೀರಾವರಿ ಘಟಕಗಳಿಗೆ (ಬೆಳೆಗಳಿಗೆ ಮಾತ್ರ) ಶೇ. 90 ಸಹಾಯಧನ ನೀಡುತಾರೆ.
  • ಕೊಳವೆ ಬಾವಿ ಅಥವಾ ನೀರಾವರಿ ಮೂಲ ಹೊಂದಿರುವ ಹಾಗೂ ಕನಿಷ್ಠ 1 ಎಕರೆ ಜಮೀನು ಹೊಂದಿರುವ ರೈತರು ಈ ಯೋಜನೆಯ ಸದುಪಯೋಗ ಪಡೆಯಬಹುದು.

ಆಹಾರ ಸಂಸ್ಕರಣಾ ಘಟಕಗಳಿಗೆ ನೆರವು

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರೀಕರಣ ಯೋಜನೆ ಅಡಿ:

  • ಹೊಸ ಆಹಾರ ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸಲು ಹಾಗೂ ಈಗಿರುವ ಘಟಕಗಳ ಉನ್ನತೀಕರಣ ಮತ್ತು ವಿಸ್ತರಣೆಗೆ ನೆರವು ದೊರೆಯಲಿದೆ.
  • ಈ ಯೋಜನೆಯಲ್ಲಿ ಶೇ. 35 ಕೇಂದ್ರ ಸಹಾಯಧನ + ಶೇ. 15 ರಾಜ್ಯ ಸಹಾಯಧನ = ಒಟ್ಟು ಶೇ. 50 ಸಹಾಯಧನ ದೊರೆಯುತ್ತದೆ.
  • ಒಟ್ಟು ವೆಚ್ಚದಲ್ಲಿ ಕೇವಲ ಶೇ. 10 ರೈತರು ಭರಿಸಬೇಕು, ಉಳಿದ ಶೇ. 90 ಬ್ಯಾಂಕ್ ಸಾಲವಾಗಿ ಲಭ್ಯ.
  • ಬೆಳೆಯ ಸಂಸ್ಕರಣೆ, ಮೌಲ್ಯವರ್ಧನೆ, ಪ್ಯಾಕಿಂಗ್, ಲೇಬಲಿಂಗ್ ಮತ್ತು ಮಾರುಕಟ್ಟೆ ಬೆಂಬಲ ಘಟಕಗಳಿಗೆ ಈ ನೆರವು.

ದೇಸಿ ತಳಿಗಳ ಸಂರಕ್ಷಣೆ:

  • ಜಿಲ್ಲೆಯಾದ್ಯಂತ ರೈತರ ಬಳಿ ಇರುವ ದೇಸಿ ತಳಿಗಳನ್ನು ಅವರ ಹೆಸರಿನಲ್ಲಿಯೇ ಸಂರಕ್ಷಣೆ ಮಾಡಲಾಗುತ್ತಿದೆ.
  • ಈಗಾಗಲೇ 12 ತಳಿಗಳನ್ನು ಸಂಗ್ರಹಿಸಲಾಗಿದೆ.
  • ರೈತರು ತಮ್ಮ ಬಳಿ ದೇಸಿ ತಳಿಗಳು ಇದ್ದರೆ ತಕ್ಷಣ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬೇಕು.

Krishi Bhagya Scheme 2025 ಅರ್ಜಿ ಸಲ್ಲಿಸುವುದು ಹೇಗೆ?

  • ಆಸಕ್ತ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು.
  • ಹೆಚ್ಚಿನ ಮಾಹಿತಿಗಾಗಿ:
    • ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ
    • ರೈತ ಕರೆ ಕೇಂದ್ರ – 1800-425-3553

CIBIL Score: ಗುಡ್‌ ನ್ಯೂಸ್; ಸಿಬಿಲ್ ಸ್ಕೋರ್ ಇಲ್ಲದೆಯೂ ಸಾಲ ಪಡೆಯಬಹುದು

ಹೈನುಗಾರಿಕೆ ಮತ್ತು ಇತರೆ ಯೋಜನೆಗಳಿಗಾಗಿ 4 ಲಕ್ಷ ರೂ. ಸಹಾಯಧನ‌

PM SVANidhi Scheme: ಪಿಎಂ ಸ್ವನಿಧಿ ಯೋಜನೆ ಅವಧಿ ವಿಸ್ತರಣೆ 50,000 ರೂ.ವರೆಗೆ ಸಾಲ ಸೌಲಭ್ಯ

Telegram Group Join Now
WhatsApp Group Join Now

Leave a Comment