SSLC ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ | Karnataka SSLC PUC Exam Time Table 2026 Download

By: ವಿಜಯಲಕ್ಷ್ಮೀ ಪೂಜಾರಿ

On: Sunday, September 21, 2025 8:24 PM

Karnataka SSLC PUC Exam Time Table 2026 Download
Google News
Follow Us
Telegram Group Join Now
WhatsApp Group Join Now

ಬೆಂಗಳೂರು: 2025-26 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು (SSLC PUC Exam Time Table 2026) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಪ್ರಕಟಿಸಿದೆ. ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಅಕ್ಟೋಬರ್ 9 ರೊಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಆಕ್ಷೇಪಣೆಗಳನ್ನು ಮಂಡಳಿಯ ಇ-ಮೇಲ್ ವಿಳಾಸ [email protected] ಗೆ ಅಥವಾ ಹಾರ್ಡ್‌ಕಾಪಿ ಮೂಲಕ ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು – 560003 ವಿಳಾಸಕ್ಕೆ ಕಳುಹಿಸಬೇಕು. ನಿಗದಿತ ದಿನಾಂಕದ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ವೇಳಾಪಟ್ಟಿ ಮಂಡಳಿಯ ಅಧಿಕೃತ ವೆಬ್‌ಸೈಟ್ www.kseab.karnataka.gov.in ನಲ್ಲಿ ಲಭ್ಯವಿದೆ.

2nd PUC Exam Time Table 2026: ಪರೀಕ್ಷೆ – 1 ರ ವೇಳಾಪಟ್ಟಿ

  • ಫೆ.28: ಕನ್ನಡ, ಅರೇಬಿಕ್
  • ಮಾ.2: ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನೋವಿಜ್ಞಾನ
  • ಮಾ.3: ಇಂಗ್ಲಿಷ್
  • ಮಾ.4: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
  • ಮಾ.5: ಇತಿಹಾಸ, ಗೃಹವಿಜ್ಞಾನ
  • ಮಾ.6: ಭೌತಶಾಸ್ತ್ರ
  • ಮಾ.7: ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭಶಾಸ್ತ್ರ
  • ಮಾ.9: ರಸಾಯನಶಾಸ್ತ್ರ, ಶಿಕ್ಷಣ, ಮೂಲ ಗಣಿತ
  • ಮಾ.10: ಅರ್ಥಶಾಸ್ತ್ರ
  • ಮಾ.11: ತರ್ಕ, ಜೀವಶಾಸ್ತ್ರ, ವಿದ್ಯುನ್ಮಾನ, ಗಣಕಶಾಸ್ತ್ರ
  • ಮಾ.12: ಹಿಂದಿ
  • ಮಾ.13: ರಾಜ್ಯಶಾಸ್ತ್ರ
  • ಮಾ.14: ಲೆಕ್ಕಶಾಸ್ತ್ರ
  • ಮಾ.16: ಸಮಾಜಶಾಸ್ತ್ರ, ಗಣಿತ
  • ಮಾ.17: ಹಿಂದೂಸ್ತಾನಿ ಸಂಗೀತ, NSQF ವಿಷಯಗಳು

SSLC Exam Time Table 2026: ಎಸ್‌ಎಸ್‌ಎಲ್‌ಸಿ ಪರೀಕ್ಷೆ – 1 ವೇಳಾಪಟ್ಟಿ

  • ಮಾ.18: ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ (NCRT), ಸಂಸ್ಕೃತ)
  • ಮಾ.20: ಗಣಿತ
  • ಮಾ.23: ವಿಜ್ಞಾನ / ಹಿಂದೂಸ್ತಾನಿ ಸಂಗೀತ / ಕರ್ನಾಟಕ ಸಂಗೀತ
  • ಮಾ.25: ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)
  • ಮಾ.28: ಸಮಾಜ ವಿಜ್ಞಾನ
  • ಮಾ.30: ತೃತೀಯ ಭಾಷೆ ಹಿಂದಿ / NSQF ವಿಷಯಗಳು
  • ಏ.1: JTS ವಿಷಯಗಳು

ಎಸ್‌ಎಸ್‌ಎಲ್‌ಸಿ ಪರೀಕ್ಷೆ – 2: ಮೇ 18 ರಿಂದ ಪ್ರಾರಂಭವಾಗಲಿದೆ.

ದ್ವಿತೀಯ ಪಿಯುಸಿ ಪರೀಕ್ಷೆ – 2 (2026 ಏಪ್ರಿಲ್ – ಮೇ)

  • ಏ.25: ಕನ್ನಡ, ಅರೇಬಿಕ್
  • ಏ.27: ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕ, ಜೀವಶಾಸ್ತ್ರ
  • ಏ.28: ರಾಜ್ಯಶಾಸ್ತ್ರ, ವಿದ್ಯುನ್ಮಾನ, ಗಣಕಶಾಸ್ತ್ರ
  • ಏ.29: ಗಣಿತ, ಗೃಹವಿಜ್ಞಾನ, ಮೂಲ ಗಣಿತ
  • ಏ.30: ಅರ್ಥಶಾಸ್ತ್ರ
  • ಮೇ 2: ಇತಿಹಾಸ, ರಸಾಯನಶಾಸ್ತ್ರ
  • ಮೇ 4: ಇಂಗ್ಲಿಷ್
  • ಮೇ 5: ಹಿಂದಿ
  • ಮೇ 6: ವ್ಯವಹಾರ ಅಧ್ಯಯನ, ಭೌತಶಾಸ್ತ್ರ, ಶಿಕ್ಷಣಶಾಸ್ತ್ರ
  • ಮೇ 7: ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ
  • ಮೇ 8: ಭೂಗೋಳಶಾಸ್ತ್ರ, ಮನೋವಿಜ್ಞಾನ, ಭೂಗರ್ಭಶಾಸ್ತ್ರ
  • ಮೇ 9 (ಬೆಳಗ್ಗೆ): ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
  • ಮೇ 9 (ಮಧ್ಯಾಹ್ನ): ಹಿಂದೂಸ್ತಾನಿ ಸಂಗೀತ, NSQF ವಿಷಯಗಳು

ಈ ವೇಳಾಪಟ್ಟಿ ತಾತ್ಕಾಲಿಕವಾಗಿದ್ದು, ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳನ್ನು ಪರಿಗಣಿಸಿದ ನಂತರ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂಧು KSEAB ತಿಳಿಸಿದೆ.

SSLC 2nd PUC Exam Time Table 2026: Download

CIBIL Score: ಗುಡ್‌ ನ್ಯೂಸ್; ಸಿಬಿಲ್ ಸ್ಕೋರ್ ಇಲ್ಲದೆಯೂ ಸಾಲ ಪಡೆಯಬಹುದು

ಕೃಷಿ ಭಾಗ್ಯ ಯೋಜನೆ 2025-26: ರೈತರಿಂದ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment