GST News: ಜಿಎಸ್‌ಟಿ ದರ ಇಳಿಕೆ: ದಿನಬಳಕೆ ವಸ್ತುಗಳಿಗೆ ಶೂನ್ಯ ತೆರಿಗೆ, ಏನು ದುಬಾರಿ? ಈ ದಿನದಿಂದ ಹೊಸ ದರಗಳು ಜಾರಿ..!

By: ವಿಜಯಲಕ್ಷ್ಮೀ ಪೂಜಾರಿ

On: Thursday, September 4, 2025 6:20 AM

GST News- GST Rate Cut
Google News
Follow Us
Telegram Group Join Now
WhatsApp Group Join Now

ನವದೆಹಲಿ: ದಸರಾ ಮತ್ತು ದೀಪಾವಳಿ ಹಬ್ಬಕ್ಕೂ ಮೊದಲೇ ಕೇಂದ್ರ ಸರ್ಕಾರದಿಂದ ಜನಸಾಮಾನ್ಯರಿಗೆ ತೆರಿಗೆ ಭಾರ ಕಡಿಮೆ (GST News- GST Rate Cut) ಮಾಡಿರುವ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಸೆ.3 ಬುಧವಾರ ನಡೆದ ಜಿಎಸ್‌ಟಿ ಮಂಡಳಿಯ 56 ನೇ ಸಭೆಯಲ್ಲಿ ಹಲವು ದಿನ ಬಳಕೆ ವಸ್ತುಗಳು, ಔಷಧಿಗಳು, ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಮೇಲಿನ ತೆರಿಗೆ ಕಡಿತ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಈಗಾಗಲೇ ಹಣಕಾಸು ಸಚಿವರ ಗುಂಪು ಜಿಎಸ್‌ಟಿ ದರ (GST News) ಇಳಿಕೆಗೆ ಸಂಬಂಧಿಸಿದ ಪ್ರಸ್ತಾವನೆಗೆ ಒಪ್ಪಿಗೆ ನೀಡಿತ್ತು. ಅದರಂತೆ, ಶೇ. 28ರ ತೆರಿಗೆಯನ್ನ ಶೇ. 18ಕ್ಕೆ ಇಳಿಸುವುದರ ಜೊತೆಗೆ, ಶೇ. 18 ಮತ್ತು ಶೇ. 12ರ ಶ್ರೇಣಿಯಲ್ಲಿದ್ದ ಹೆಚ್ಚಿನ ವಸ್ತುಗಳನ್ನು ಕೇವಲ ಶೇ. 5ರ ತೆರಿಗೆ ವ್ಯಾಪ್ತಿಗೆ ತರಲು ಶಿಫಾರಸು ಮಾಡಲಾಗಿತ್ತು. ಈಗ ಜಿಎಸ್‌ಟಿ ಕೌನ್ಸಿಲ್‌ ಈ ನಿರ್ಧಾರಕ್ಕೆ ಅಧಿಕೃತ ಮುದ್ರೆ ಒತ್ತಿದೆ. ತಂಬಾಕು ಉತ್ಪನ್ನಗಳು ಮತ್ತು ಐಶಾರಾಮಿ ವಾಹನಗಳ ಮೇಲೆ ಈಗಿರುವ ಶೇ. 40ರ ‘ಸಿನ್ ಟ್ಯಾಕ್ಸ್’ ಮುಂದುವರಿಯಲಿದೆ.

ಇನ್ನೂ ಮುಂದೆ ಎರಡೇ ಸ್ಲ್ಯಾಬ್:

ಇದುವರೆಗೆ ಜಾರಿಯಲ್ಲಿದ್ದ ಶೇ. 5, ಶೇ. 12, ಶೇ. 18 ಮತ್ತು ಶೇ. 28 ಎಂಬ ನಾಲ್ಕು ತೆರಿಗೆ ಶ್ರೇಣಿಗಳ ಬದಲಾಗಿ, ಈಗ ಕೇವಲ ಶೇ. 5 ಮತ್ತು ಶೇ. 18 ಎಂಬ ಎರಡು ಶ್ರೇಣಿಗಳು ಮಾತ್ರ ಉಳಿಯಲಿವೆ. ದಿನಬಳಕೆ ವಸ್ತುಗಳನ್ನು ಕನಿಷ್ಠ ಅಥವಾ ಶೂನ್ಯ ತೆರಿಗೆ ವ್ಯಾಪ್ತಿಗೆ ತರಲಾಗಿದ್ದು, ಜನರ ಖರ್ಚಿನ ಭಾರ ಕಡಿಮೆಯಾಗಲಿದೆ. ಈ ಹೊಸ ದರಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿವೆ.

GST News: ಹಬ್ಬಕ್ಕೆ ತೆರಿಗೆ ಭಾರ ಇಳಿಕೆ:

ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ “ದೀಪಾವಳಿಗೆ ಡಬಲ್ ಧಮಾಕಾ” ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಈ ಜಿಎಸ್‌ಟಿ ಸುಧಾರಣೆ ಕೈಗೊಳ್ಳಲಾಗಿದೆ. ಜನಸಾಮಾನ್ಯರ ಜೀವನೋಪಾಯದ ಮೇಲಿನ ಒತ್ತಡ ತಗ್ಗಿಸುವುದೇ ಸರ್ಕಾರದ ಉದ್ದೇಶ ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Next-Gen GST ಸುಧಾರಣೆಗಳು ಈ ದೀಪಾವಳಿಗೆ ಪ್ರತಿಯೊಬ್ಬ ಭಾರತೀಯರಿಗೆ ಉಡುಗೊರೆಯಾಗಿವೆ. ಸಾಮಾನ್ಯ ಜನತೆಗೆ ತೆರಿಗೆ ಭಾರ ಗಣನೀಯವಾಗಿ ಕಡಿಮೆಯಾಗಲಿದೆ. ನಮ್ಮ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSMEs) ಹಾಗೂ ಸಣ್ಣ ಮಟ್ಟದ ಉದ್ಯಮಿಗಳಿಗೆ ದೊಡ್ಡ ಮಟ್ಟದ ಲಾಭ ಸಿಗಲಿದೆ. ದೈನಂದಿನ ಬಳಕೆಯ ವಸ್ತುಗಳು ಕಡಿಮೆ ದರದಲ್ಲಿ ಲಭ್ಯವಾಗಲಿದ್ದು, ಇದು ಆರ್ಥಿಕತೆಗೆ ಹೊಸ ಚೈತನ್ಯ ತುಂಬಲಿದೆ.”
-ನರೇಂದ್ರ ಮೋದಿ, ಪ್ರಧಾನಮಂತ್ರಿ

ಈ Next-Gen GST ಸುಧಾರಣೆ ಭಾರತಕ್ಕೆ ಐತಿಹಾಸಿಕ ದೀಪಾವಳಿ ಉಡುಗೊರೆಯಾಗಿದ್ದು, ಜೀವನವನ್ನು ಸುಗಮಗೊಳಿಸಲು ಮತ್ತು ಆತ್ಮನಿರ್ಭರ ಭಾರತವನ್ನು ನಿರ್ಮಿಸಲು ರೈತರಿಂದ ಹಿಡಿದು ಉದ್ಯಮಗಳವರೆಗೆ, ಮನೆಯವರಿಂದ ಹಿಡಿದು ವ್ಯಾಪಾರಗಳವರೆಗೆ, Next-Gen GST ಎಲ್ಲರಿಗೂ ಸಂತೋಷ ತರುತ್ತದೆ ಎಂದು ಸರ್ಕಾರ ತಿಳಿಸಿದೆ.

ಆರೋಗ್ಯ ವಿಮೆ, ಜೀವ ವಿಮೆಗಳಿಗೆ ತೆರಿಗೆ ವಿನಾಯಿತಿ:

ವೈಯಕ್ತಿಕ ಆರೋಗ್ಯ ವಿಮೆ ಮತ್ತು ಜೀವ ವಿಮೆಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದ್ದು, ಜನರಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ ವಿಮೆ ಲಭ್ಯವಾಗುವಂತೆ ಮಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಇದರೊಂದಿಗೆ, ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಿ ಸೇರಿದಂತೆ 33 ಜೀವ ರಕ್ಷಕ ಔಷಧಿಗಳಿಗೂ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಬ್ರೆಡ್, ಹಾಲಿನ ಉತ್ಪನ್ನಗಳು, ಸಾದಾ ಚಪಾತಿ, ಪರೋಟ, ಕಾಕ್ರಾ, ರೋಟಿ ಮುಂತಾದವುಗಳಿಗೂ ಶೂನ್ಯ ತೆರಿಗೆ ಸ್ಲ್ಯಾಬ್ ತರಲಾಗಿದೆ. ಇದರಿಂದ ದಿನನಿತ್ಯ ಬಳಕೆಯ ಆಹಾರ ವಸ್ತುಗಳು ಇನ್ನಷ್ಟು ಕೈಗೆಟುಕುವಂತೆ ಆಗಲಿವೆ.

ಕೂಲ್‌ ಡ್ರಿಂಕ್ಸ್‌, ತಂಬಾಕು ಉತ್ಪನ್ನಗಳ ಮೇಲೆ ದುಬಾರಿ ತೆರಿಗೆ:

ತಂಬಾಕು ಉತ್ಪನ್ನಗಳು, ಪಾನ್ ಮಸಾಲಾ, ಐಷಾರಾಮಿ ಕಾರುಗಳು ಸೇರಿದಂತೆ ಕೆಲವು ವಿಲಾಸಿ ವಸ್ತುಗಳಿಗೆ ಶೇಕಡಾ 40ರ ತೆರಿಗೆ ತರಲಾಗಿದ್ದು, ಖಾಸಗಿ ವಿಮಾನಗಳು, ಯಾಚ್‌ಗಳು ಮತ್ತು ಐಷಾರಾಮಿ ಬೋಟ್‌ಗಳಿಗೂ ಇದೇ ತೆರಿಗೆ ದರ ಅನ್ವಯವಾಗಲಿದೆ. ಅಲ್ಲದೆ, ಕೂಲ್‌ ಡ್ರಿಂಕ್ಸ್‌ಗಳಿಗೂ ಶೇ. 40ರ ತೆರಿಗೆ ಜಾರಿಯಲ್ಲೇ ಮುಂದುವರಿಯಲಿದೆ. ಇದರಿಂದ ತಂಪು ಪಾನೀಯಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

CIBIL Score: ಗುಡ್‌ ನ್ಯೂಸ್; ಸಿಬಿಲ್ ಸ್ಕೋರ್ ಇಲ್ಲದೆಯೂ ಸಾಲ ಪಡೆಯಬಹುದು

GST Rate Cut- ದೈನಂದಿನ ವಸ್ತುಗಳು:

ವಸ್ತುಗಳುಹಳೆಯ ದರಹೊಸ ದರ
ಹೇರ್ ಆಯಿಲ್, ಶಾಂಪೂ, ಟೂತ್‌ಪೇಸ್ಟ್, ಸೋಪ್, ಟೂತ್ ಬ್ರಷ್, ಶೇವಿಂಗ್ ಕ್ರೀಮ್18%5%
ಬೆಣ್ಣೆ, ತುಪ್ಪ, ಚೀಸ್ ಮತ್ತು ಡೈರಿ ಸ್ಪ್ರೆಡ್‌ಗಳು12%5%
ಪ್ಯಾಕೇಜ್ ಮಾಡಿದ ಕುರುಕಲು ತಿಂಡಿಗಳು12%5%
ಪಾತ್ರೆಗಳು12%5%
ಹಾಲುಣಿಸುವ ಬಾಟಲ್‌ಗಳು, ಮಕ್ಕಳಿಗಾಗಿ ನ್ಯಾಪ್ಕಿನ್‌ಗಳು ಮತ್ತು ಕ್ಲಿನಿಕಲ್ ಡೈಪರ್‌ಗಳು12%5%
ಹೊಲಿಗೆ ಯಂತ್ರಗಳು ಮತ್ತು ಬಿಡಿ ಭಾಗಗಳು12%5%

ಕೃಷಿ ಮತ್ತು ರೈತರಿಗೆ ಸಂಬಂಧಿತ ಉತ್ಪನ್ನಗಳು:

ವಸ್ತುಗಳುಹಳೆಯ ದರಹೊಸ ದರ
ಟ್ರ್ಯಾಕ್ಟರ್ ಟೈರ್‌ಗಳು ಮತ್ತು ಬಿಡಿಭಾಗಗಳು18%5%
ಟ್ರ್ಯಾಕ್ಟರ್‌ಗಳು12%5%
ನಿರ್ದಿಷ್ಟ ಜೈವಿಕ-ಕೀಟನಾಶಕಗಳು, ಸೂಕ್ಷ್ಮ-ಪೋಷಕಾಂಶಗಳು12%5%
ಹನಿ ನೀರಾವರಿ ವ್ಯವಸ್ಥೆ ಮತ್ತು ಸ್ಪ್ರಿಂಕ್ಲರ್‌ಗಳು12%5%
ಕೃಷಿ, ತೋಟಗಾರಿಕೆ ಅಥವಾ ಅರಣ್ಯ ಯಂತ್ರಗಳು12%5%

ಆರೋಗ್ಯ ವಲಯ:

ವಸ್ತುಗಳುಹಳೆಯ ದರಹೊಸ ದರ
ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆ18%ತೆರಿಗೆ ಇರುವುದಿಲ್ಲ
ಥರ್ಮಾಮೀಟರ್18%5%
ವೈದ್ಯಕೀಯ ದರ್ಜೆಯ ಆಮ್ಲಜನಕ12%5%
ಎಲ್ಲಾ ಡಯಾಗ್ನೋಸ್ಟಿಕ್ ಕಿಟ್‌ಗಳು ಮತ್ತು ರೀಏಜೆಂಟ್ಸ್‌12%5%
ಗ್ಲುಕೋಮೀಟರ್ ಮತ್ತು ಟೆಸ್ಟ್ ಸ್ಟ್ರಿಪ್‌ಗಳು12%5%
ದೃಷ್ಟಿ ಸರಿಪಡಿಸುವ ಕನ್ನಡಕಗಳು12%5%

ಹೈನುಗಾರಿಕೆ ಮತ್ತು ಇತರೆ ಯೋಜನೆಗಳಿಗಾಗಿ 4 ಲಕ್ಷ ರೂ. ಸಹಾಯಧನ‌

ಆಟೋಮೊಬೈಲ್‌ಗಳು:

ವಸ್ತುಗಳುಹಳೆಯ ದರಹೊಸ ದರ
ಪೆಟ್ರೋಲ್ & ಹೈಬ್ರಿಡ್, LPG, CNG ಕಾರುಗಳು (1200cc & 4 ಮೀಟರ್ ಒಳಗೆ)28%18%
ಡೀಸೆಲ್ & ಹೈಬ್ರಿಡ್ ಕಾರುಗಳು (1500cc & 4 ಮೀಟರ್ ಒಳಗೆ)28%18%
ತ್ರಿಚಕ್ರ ವಾಹನಗಳು28%18%
ಮೋಟಾರ್ ಸೈಕಲ್‌ಗಳು (350cc & ಕೆಳಗೆ)28%18%
ಸರಕು ಸಾಗಣೆ ವಾಹನಗಳು28%18%

ಶೈಕ್ಷಣಿಕ ಉತ್ಪನ್ನಗಳು:

ವಸ್ತುಗಳುಹಳೆಯ ದರಹೊಸ ದರ
ನಕ್ಷೆಗಳು, ಚಾರ್ಟ್‌ಗಳು ಮತ್ತು ಗ್ಲೋಬ್‌ಗಳು12%Nil
ಪೆನ್ಸಿಲ್‌ಗಳು, ಶಾರ್ಪನರ್‌ಗಳು, ಕ್ರಯಾನ್‌ಗಳು ಮತ್ತು ಪೇಸ್ಟಲ್‌ಗಳು12%Nil
ಅಭ್ಯಾಸ ಪುಸ್ತಕಗಳು ಮತ್ತು ನೋಟ್‌ಬುಕ್‌ಗಳು12%Nil
ಅಳಿಸುವ ರಬ್ಬರ್‌ (ಎರೇಸರ್)5%Nil

ಎಲೆಕ್ಟ್ರಾನಿಕ್ ಉಪಕರಣಗಳು:

ವಸ್ತುಗಳುಹಳೆಯ ದರಹೊಸ ದರ
ಏರ್ ಕಂಡಿಷನರ್‌ಗಳು (AC)28%18%
ಟೆಲಿವಿಷನ್ (32 ಇಂಚಿಗಿಂತ ಹೆಚ್ಚು)28%18%
ಮಾನಿಟರ್‌ಗಳು ಮತ್ತು ಪ್ರೊಜೆಕ್ಟರ್‌ಗಳು28%18%
ಪಾತ್ರೆ ತೊಳೆಯುವ ಯಂತ್ರಗಳು (ಡಿಶ್‌ವಾಷರ್)28%18%

Next-Generation GST Reform:

Telegram Group Join Now
WhatsApp Group Join Now

Leave a Comment