ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ದಸರಾ ಹಬ್ಬಕ್ಕೆ ಗುಡ್‌ನ್ಯೂಸ್. ಬಾಕಿ ಇರುವ ಗೃಹಲಕ್ಷ್ಮಿ ಯೋಜನೆಯ 2000 ರೂ. ಹಣವನ್ನು (Gruhalakshmi Amount) ಬಿಡುಗಡೆ ಮಾಡಿರುವ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ.
ರಾಜ್ಯದ 1.24 ಕೋಟಿ ಫಲಾನುಭವಿಗಳ ಖಾತೆಗೆ 22 ನೇ ಕಂತಿನ ಹಣ ಈಗಾಗಲೇ ಜಮೆಯಾಗಿದ್ದು, 23 ನೇ ಕಂತಿನ ಹಣವನ್ನು 3 ದಿನಗಳ ಹಿಂದೆ ಬಿಡುಗಡೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಮೈಸೂರಿನಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ, “ಇಲ್ಲಿಯವರೆಗೆ ಫಲಾನುಭವಿಗಳ ಖಾತೆಗೆ 22 ಕಂತುಗಳು ತಲುಪಿವೆ. ಹಬ್ಬದ ಸಂಭ್ರಮಕ್ಕೆ ಅನುಕೂಲವಾಗಲೆಂದು ಮೂರು ದಿನಗಳ ಹಿಂದೆ 23ನೇ ಕಂತು ಬಿಡುಗಡೆ ಮಾಡಲಾಗಿದೆ. ಆಗಸ್ಟ್ ತಿಂಗಳ ಹಣವನ್ನು ಕೂಡ ಶೀಘ್ರವೇ ತಲುಪಿಸುವ ಕ್ರಮ ಕೈಗೊಳ್ಳಲಾಗಿದೆ,” ಎಂದು ತಿಳಿಸಿದ್ದಾರೆ.
ಹಂತ ಹಂತವಾಗಿ ಹಣ ಬಿಡುಗಡೆ:
ಆರ್ಥಿಕ ಇಲಾಖೆಯಿಂದ ಜಿಲ್ಲಾವಾರು ಖಜಾನೆಗಳಿಗೆ ಹಣ ವರ್ಗಾವಣೆ ಆಗಿದ್ದು, ಖಾತೆಗಳಿಗೆ ಹಣ ಜಮೆಯಾಗುವ ಪ್ರಕ್ರಿಯೆ ಆರಂಭವಾಗಿದೆ. ಒಂದು–ಎರಡು ದಿನಗಳ ಅಂತರದಲ್ಲಿ ಹಣ ಎಲ್ಲರಿಗೂ ತಲುಪಲಿದ್ದು, ಈ ವಾರಾಂತ್ಯದೊಳಗೆ ರಾಜ್ಯದ ಪ್ರತಿಯೊಬ್ಬ ಫಲಾನುಭವಿಗೂ ಹಣ ಖಚಿತವಾಗಿ ಸಿಗಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
Gruhalakshmi Amount- ಇದುವರೆಗೂ ಎಷ್ಟು ಹಣ?:
ಯೋಜನೆ ಆರಂಭವಾದಾಗಿನಿಂದ ಪ್ರತಿಯೊಬ್ಬ ಫಲಾನುಭವಿಗೂ ತಿಂಗಳಿಗೆ 2 ಸಾವಿರ ರೂ.ಗಳಂತೆ 22 ಕಂತುಗಳಲ್ಲಿ ಒಟ್ಟು 44 ಸಾವಿರ ರೂ. ಖಾತೆಗೆ ಜಮೆಯಾಗಿದೆ.
ಸಹಕಾರ ಸಂಘ ಸ್ಥಾಪನೆ ಚಿಂತನೆ:
ಮಹಿಳೆಯರಿಗೆ ಬ್ಯಾಂಕ್‌ಗಳಿಂದ ಸರಿಯಾದ ಸಾಲ ಸೌಲಭ್ಯ ದೊರೆಯದ ಸಮಸ್ಯೆ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಹೆಸರಿನಲ್ಲಿ ಸಹಕಾರ ಸಂಘವನ್ನು ಆರಂಭಿಸಲು ತೀರ್ಮಾನಿಸಿದೆ. ಇದರಿಂದ ಮಹಿಳೆಯರು ನೇರವಾಗಿ ಸಾಲ ಪಡೆದು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದು ಸಚಿವೆ ಸ್ಪಷ್ಟಪಡಿಸಿದರು.
ಗ್ಯಾರಂಟಿ ಯೋಜನೆಗಳ ಮಹತ್ವ:
“ಮಹಿಳೆ ಎಂದರೆ ಸ್ವಾವಲಂಬನೆಯ ಪ್ರತೀಕ. ಪಂಚ ಗ್ಯಾರಂಟಿ ಯೋಜನೆಗಳಿಂದ ಲಕ್ಷಾಂತರ ಮಹಿಳೆಯರು ಆರ್ಥಿಕ ಬಲ ಪಡೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಉದ್ದೇಶ ಮಹಿಳೆಯರನ್ನು ಸ್ವತಂತ್ರವಾಗಿ ಬದುಕಲು ಶಕ್ತಿಯುತಗೊಳಿಸುವುದು. ದುಡಿಯುವ ಕೈಗಳಿಗೆ ಉದ್ಯೋಗದ ಅವಕಾಶ ಕಲ್ಪಿಸುವುದು,” ಎಂದು ಹೆಬ್ಬಾಳ್ಕರ್ ವಿವರಿಸಿದರು.
ದಸರಾ ಹಬ್ಬದ ಸಂದೇಶ:
“ಮಹಿಳೆಯರ ಶಕ್ತಿ, ತಾಳ್ಮೆ ಮತ್ತು ಸಮೃದ್ಧಿಯ ಸಂಕೇತವೇ ದಸರಾ ಹಬ್ಬ. ನವ ದೇವಿಯ ಆರಾಧನೆ ಅಂದರೆ ದುಷ್ಟರ ವಿರುದ್ಧ ಶಿಷ್ಟರ ಜಯ. ಇಂದಿನ ದಸರಾ ಎಲ್ಲ ಧರ್ಮ, ಜಾತಿ, ಸಮುದಾಯದ ಜನರ ಹಬ್ಬವಾಗಿದೆ. ಕರ್ನಾಟಕದ ಈ ಉತ್ಸವ ವಿಶ್ವವಿಖ್ಯಾತವಾಗಿರುವುದಕ್ಕೆ ಮಹಿಳೆಯರ ಪಾತ್ರವೇ ಪ್ರಮುಖ,” ಎಂದು ಸಚಿವೆ ಅಭಿಪ್ರಾಯಪಟ್ಟರು.
CIBIL Score: ಗುಡ್ ನ್ಯೂಸ್; ಸಿಬಿಲ್ ಸ್ಕೋರ್ ಇಲ್ಲದೆಯೂ ಸಾಲ ಪಡೆಯಬಹುದು





