ಬೆಂಗಳೂರು: ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ಭೇಟಿ ನೀಡುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ದೊಡ್ಡ ಮಟ್ಟದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ. ಈ ಬಾರಿ ಒಟ್ಟು 2,300ಕ್ಕೂ ಹೆಚ್ಚು ವಿಶೇಷ ಬಸ್‌ಗಳನ್ನು (Dasara Special Bus) ಸಂಚರಿಸಲು ನಿರ್ಧರಿಸಲಾಗಿದೆ. ಜೊತೆಗೆ ಪ್ರವಾಸಿಗರಿಗಾಗಿ ವಿಶೇಷ ಪ್ಯಾಕೇಜ್ ಪ್ರವಾಸಗಳು ಕೂಡ ಸಿದ್ಧವಾಗಿವೆ.
ಈ ಕುರಿತಂತೆ KSRTC ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, “ಮೈಸೂರು ದಸರಾ-2025 ಮಹೋತ್ಸವದ ಅಂಗವಾಗಿ ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಂದ ಮೈಸೂರಿಗೆ ಬರುವ ಪ್ರವಾಸಿಗರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿರುವ ವೇಗದೂತ, ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್), ಅಂಬಾರಿ ಕ್ಲಬ್ ಕ್ಲಾಸ್, ಪಲ್ಲಕ್ಕಿ ಸ್ಲೀಪರ್, ಅಶ್ವಮೇಧ ಸಾರಿಗೆ ಸೇವೆಗಳ ಜೊತೆಗೆ ಹೆಚ್ಚುವರಿ ಬಸ್‌ಗಳ ವಿಶೇಷ ಸೇವೆಗಳ ವ್ಯವಸ್ಥೆ ಮಾಡಲಾಗಿದೆ” ಎಂದು ತಿಳಿಸಿದೆ.
ಮೈಸೂರು ದಸರಾ 2025 ವಿಶೇಷ KSRTC ಬಸ್ ಸೇವೆಗಳು:
- ದಸರಾ ಹಬ್ಬದ ಪ್ರಯುಕ್ತ 2300ಕ್ಕೂ ಹೆಚ್ಚು ವಿಶೇಷ ಬಸ್‌ಗಳು ಕಾರ್ಯಾಚರಣೆ.
- ಬೆಂಗಳೂರು → ರಾಜ್ಯದ ಹಾಗೂ ಅಂತರರಾಜ್ಯಗಳ ವಿವಿಧ ಸ್ಥಳಗಳಿಗೆ ಸೆಪ್ಟೆಂಬರ್ 26, 27 ಮತ್ತು 30ರಂದು ವಿಶೇಷ ಬಸ್‌ಗಳು.
- ಹಿಂತಿರುಗುವ ಸೇವೆಗಳು → ಅಕ್ಟೋಬರ್ 2 ಮತ್ತು 5ರಂದು ರಾಜ್ಯದ ಹಾಗೂ ನೆರೆರಾಜ್ಯಗಳಿಂದ ಬೆಂಗಳೂರಿಗೆ.
- ಮೈಸೂರಿಗೆ ಬರುವವರಿಗೆ 610 ವಿಶೇಷ ಬಸ್‌ಗಳು (ಬೆಂಗಳೂರು-ಮೈಸೂರು + ಪ್ರವಾಸಿ ಪ್ಯಾಕೇಜ್ ಸೇರಿ).
- ಮೈಸೂರು ಪ್ರವಾಸಿ ಪ್ಯಾಕೇಜ್‌ಗಳು – ಗಿರಿದರ್ಶಿನಿ, ಜಲದರ್ಶಿನಿ, ದೇವದರ್ಶಿನಿ (ಸೆಪ್ಟೆಂಬರ್ 27–ಅಕ್ಟೋಬರ್ 7).
- ಫ್ಲೈ ಬಸ್ ಸೇವೆ – ಕೆಂಪೇಗೌಡ ವಿಮಾನ ನಿಲ್ದಾಣದಿಂದ ನೇರವಾಗಿ ಮೈಸೂರಿಗೆ.
- “ಮಾಹಿತಿ ಕೇಂದ್ರ” – ಮೈಸೂರು ನಗರ ಮತ್ತು ಗ್ರಾಮಾಂತರ ಬಸ್ ನಿಲ್ದಾಣಗಳಲ್ಲಿ.
- ಮುಂಗಡ ಟಿಕೆಟ್‌ಗಳನ್ನು KSRTC ವೆಬ್‌ಸೈಟ್ / ಮೊಬೈಲ್ ಆಪ್ / ಕೌಂಟರ್‌ಗಳಲ್ಲಿ ಬುಕ್ ಮಾಡಬಹುದು.
- 4 ಅಥವಾ ಹೆಚ್ಚು ಜನರು ಒಟ್ಟಿಗೆ ಬುಕ್ ಮಾಡಿದರೆ → 5% ರಿಯಾಯಿತಿ.
- ಹೋಗಿ-ಬರುವ ಟಿಕೆಟ್ ಒಟ್ಟಿಗೆ ಬುಕ್ ಮಾಡಿದರೆ → 10% ರಿಯಾಯಿತಿ.
- ಎಲ್ಲಾ ತಾಲ್ಲೂಕು / ಜಿಲ್ಲೆ ಬಸ್ ನಿಲ್ದಾಣಗಳಿಂದಲೂ ವಿಶೇಷ ಬಸ್‌ಗಳು, ಪ್ರಯಾಣಿಕರ ದಟ್ಟಣೆಗನುಗುಣವಾಗಿ.
ದಸರಾ ರಜೆ ಪ್ರಯುಕ್ತ 2,300ಕ್ಕೂ ಹೆಚ್ಚು ವಿಶೇಷ ಸಾರಿಗೆ ವ್ಯವಸ್ಥೆ:
ದಸರಾ ರಜೆ ಪ್ರಯುಕ್ತ ಸೆಪ್ಟೆಂಬರ್ 26, 27 ಮತ್ತು 30 ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆರಾಜ್ಯಗಳಿಗೆ KSRTC 2,300ಕ್ಕೂ ಹೆಚ್ಚು ಬಸ್‌ಗಳನ್ನು ವ್ಯವಸ್ಥೆ ಮಾಡಿದೆ. ಈ ಬಸ್‌ಗಳು ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಹಾಗೂ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಿಂದ ಹೊರಡಲಿವೆ. ಮತ್ತೆ ಹಿಂತಿರುಗುವ ಸೇವೆಗಳನ್ನು ಅಕ್ಟೋಬರ್ 2 ಮತ್ತು 5 ರಂದು ಮೈಸೂರು ಹಾಗೂ ಇತರೆ ಸ್ಥಳಗಳಿಂದ ಬೆಂಗಳೂರಿಗೆ ನಿರ್ವಹಿಸಲಾಗುವುದು.
- ರಾಜ್ಯದಲ್ಲಿ: ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ವಿಶೇಷ ಬಸ್‌ಗಳು ಕಾರ್ಯಾಚರಣೆ ಮಾಡುತ್ತವೆ.
- ನೆರೆರಾಜ್ಯಗಳಲ್ಲಿ: ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿರಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪೂನಾ, ಏರ್ನಾಕುಲಂ, ಪಾಲ್ಗಾಟ್ ಹಾಗೂ ಇತರೆ ಪ್ರಮುಖ ತಾಣಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆ.
Dasara Special Bus: ಮೈಸೂರಿಗಾಗಿ 610 ಹೆಚ್ಚುವರಿ ಬಸ್‌ಗಳು:
ಮೈಸೂರು ದಸರಾ-2025 ಪ್ರಯುಕ್ತ, ವಿಶೇಷವಾಗಿ 610 ಹೆಚ್ಚುವರಿ ಬಸ್‌ಗಳನ್ನೂ ಸಂಚರಿಸಲಾಗುತ್ತಿದೆ.
- 260 ಬಸ್‌ಗಳು: ಬೆಂಗಳೂರಿನಿಂದ ನೇರವಾಗಿ ಮೈಸೂರಿಗೆ.
- 350 ಬಸ್‌ಗಳು: ಮೈಸೂರು ಸುತ್ತಮುತ್ತಲಿನ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ.
ಇದರಲ್ಲಿ ಚಾಮುಂಡಿ ಬೆಟ್ಟ, ಕೆ.ಆರ್.ಎಸ್., ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ, ಮಂಡ್ಯ, ಚಾಮರಾಜನಗರ, ಗುಂಡ್ಲುಪೇಟೆ ಮುಂತಾದ ಸ್ಥಳಗಳಿವೆ.
ಇದಲ್ಲದೆ, ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ Fly Bus ಸೇವೆ ಕೂಡ ಲಭ್ಯವಿದೆ.
ವಿಶೇಷ ಪ್ಯಾಕೇಜ್ ಪ್ರವಾಸಗಳು
ಮೈಸೂರಿಗೆ ಬರುವ ಪ್ರವಾಸಿಗರಿಗೆ KSRTC ಒಂದು ದಿನದ ಪ್ಯಾಕೇಜ್ ಟೂರ್‌ಗಳನ್ನು ಹಮ್ಮಿಕೊಂಡಿದೆ.
- ಗಿರಿದರ್ಶಿನಿ (₹450/₹300): ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟ.
- ಜಲದರ್ಶಿನಿ (₹500/₹350): ಬೈಲಕುಪ್ಪೆ ಗೋಲ್ಡನ್ ಟೆಂಪಲ್, ದುಬಾರೆ, ಹಾರಂಗಿ ಜಲಾಶಯ, ಕೆ.ಆರ್.ಎಸ್.
- ದೇವದರ್ಶಿನಿ (₹330/₹225): ನಂಜನಗೂಡು, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ.
ಈ ಪ್ಯಾಕೇಜ್ ಪ್ರವಾಸಗಳು ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 7 ರವರೆಗೆ ಪ್ರತಿದಿನ ಬೆಳಿಗ್ಗೆ ಮೈಸೂರಿನಿಂದ ಪ್ರಾರಂಭವಾಗಿ, ಸಂಜೆ ಮತ್ತೆ ಮೈಸೂರಿಗೇ ವಾಪಸು ಬರುವಂತಿವೆ.
ಇ-ಟಿಕೇಟ್ ಬುಕ್ಕಿಂಗ್ ಸೌಲಭ್ಯ ಮತ್ತು ರಿಯಾಯಿತಿ:
- ಇ-ಟಿಕೇಟ್ ಬುಕ್ಕಿಂಗ್: ksrtc.in, www.ksrtc.karnataka.gov.in ಅಥವಾ KSRTC ಮೊಬೈಲ್ ಆಪ್ ಮೂಲಕ.
- ಮಾಹಿತಿ ಕೇಂದ್ರಗಳು: ಮೈಸೂರು ಗ್ರಾಮಾಂತರ ಮತ್ತು ನಗರ ಬಸ್ ನಿಲ್ದಾಣಗಳಲ್ಲಿ.
- ರಿಯಾಯಿತಿ: 4ಕ್ಕಿಂತ ಹೆಚ್ಚು ಜನ ಒಟ್ಟಿಗೆ ಬುಕ್ ಮಾಡಿದರೆ 5% ರಿಯಾಯಿತಿ. ಹೋಗುವ-ಬರುವ ಟಿಕೆಟ್ ಒಟ್ಟಿಗೆ ಬುಕ್ ಮಾಡಿದರೆ 10% ರಿಯಾಯಿತಿ.
ನೆರೆರಾಜ್ಯಗಳಿಗೂ ಸಂಪರ್ಕ:
ಹೈದರಾಬಾದ್, ಚೆನ್ನೈ, ಮಧುರೈ, ಪಣಜಿ, ಶಿರಡಿ, ಪೂನಾ, ಏರ್ನಾಕುಲಂ ಸೇರಿದಂತೆ ಕರ್ನಾಟಕದ ಹೊರ ರಾಜ್ಯಗಳಿಗೂ ವಿಶೇಷ ಬಸ್‌ಗಳು ಸಂಚರಿಸಲಿವೆ.
CIBIL Score: ಗುಡ್ ನ್ಯೂಸ್; ಸಿಬಿಲ್ ಸ್ಕೋರ್ ಇಲ್ಲದೆಯೂ ಸಾಲ ಪಡೆಯಬಹುದು





