ಬೆಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ರಾಜ್ಯದ ಶಾಲಾ ಮಕ್ಕಳಿಗೆ ರಜೆ (Dasara Holidays 2025) ದೊರೆಯಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ, ಒಟ್ಟು 18 ದಿನಗಳ ರಜೆ ಘೋಷಿಸಲಾಗಿದೆ.
ಈ ರಜೆ ಸೆಪ್ಟೆಂಬರ್ 20 ರಿಂದ ಆರಂಭವಾಗಿ ಅಕ್ಟೋಬರ್ 7 ರವರೆಗೆ ಇರಲಿದೆ. ಈ ಅವಧಿಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಇರಲಿದೆ. ವಿದ್ಯಾರ್ಥಿಗಳಿಗೆ ಹಬ್ಬದ ಸಂಭ್ರಮವನ್ನು ಸಂಪೂರ್ಣವಾಗಿ ಅನುಭವಿಸಲು ಅವಕಾಶ ಸಿಗಲಿದೆ.
ಅಕ್ಟೋಬರ್ 8 ರಿಂದ ಎರಡನೇ ಅವಧಿಯ ತರಗತಿಗಳು ಪ್ರಾರಂಭವಾಗಲಿವೆ. ಹೊಸ ಅವಧಿ ನಿರಂತರವಾಗಿ ನಡೆಯುತ್ತಾ 2026 ರ ಏಪ್ರಿಲ್ 10 ರವರೆಗೆ ಶಾಲಾ ಪಾಠಗಳು ಸಾಗಲಿವೆ ಎಂದು ಇಲಾಖೆ ತಿಳಿಸಿದೆ.
2025- 2026ರ ಶೈಕ್ಷಣಿಕ ವರ್ಷದ ಶಾಲೆಗಳ ರಜೆ ಹಾಗೂ ಪಾಠದ ದಿನಗಳ ವಿವರಗಳನ್ನು ಇಲಾಖೆ ಮುಂಚಿತವಾಗಿ ಪ್ರಕಟಿಸಿತ್ತು. ಅದರ ಪ್ರಕಾರವೇ ದಸರಾ ರಜೆಗಳ ದಿನಾಂಕಗಳನ್ನು ಅಂತಿಮಗೊಳಿಸಲಾಗಿದೆ.
ಈ ಮೂಲಕ ವಿದ್ಯಾರ್ಥಿಗಳಿಗೆ ಕೇವಲ ವಿಶ್ರಾಂತಿ ಮಾತ್ರವಲ್ಲದೆ, ಕುಟುಂಬ ಹಾಗೂ ಬಂಧುಬಳಗದೊಂದಿಗೆ ದಸರಾ ಹಬ್ಬವನ್ನು ಸಡಗರದಿಂದ ಆಚರಿಸುವ ಅವಕಾಶವೂ ದೊರೆಯಲಿದೆ.
CIBIL Score: ಗುಡ್ ನ್ಯೂಸ್; ಸಿಬಿಲ್ ಸ್ಕೋರ್ ಇಲ್ಲದೆಯೂ ಸಾಲ ಪಡೆಯಬಹುದು





