ಅಝೀಂ ಪ್ರೇಮ್‌ಜೀ ವಿದ್ಯಾರ್ಥಿವೇತನ 2025, ವರ್ಷಕ್ಕೆ 30,000 ರೂ. ಸ್ಕಾಲರ್ಶಿಪ್ | Azim Premji Scholarship 2025 Karnataka Apply Online @azimpremjifoundation.org

By: ವಿಜಯಲಕ್ಷ್ಮೀ ಪೂಜಾರಿ

On: Monday, September 22, 2025 2:11 PM

Azim Premji Scholarship 2025 Karnataka Apply Online
Google News
Follow Us
Telegram Group Join Now
WhatsApp Group Join Now

Azim Premji Scholarship 2025: ಅಝೀಂ ಪ್ರೇಮ್‌ಜೀ ಫೌಂಡೇಷನ್‌ ವತಿಯಿಂದ ಅಝೀಂ ಪ್ರೇಮ್ ಜೀ ಹೆಸರಿನಲ್ಲಿ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದಾರೆ. 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 2.5 ಲಕ್ಷ ಹೆಣ್ಣು ಮಕ್ಕಳಿಗೆ ಈ ವಿದ್ಯಾರ್ಥಿ ವೇತನವನ್ನು ನೀಡುವ ಗುರಿಯನ್ನು ಹೊಂದಿದ್ದು, ಆಸಕ್ತ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.

ಬಡ ಹಾಗೂ ಪ್ರತಿಭಾವಂತ ಹೆಣ್ಣು ಮಕ್ಕಳು ಹಣಕಾಸಿನ ತೊಂದರೆಯಿಂದಾಗಿ ಉನ್ನತ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ಇಂತಹ ಹೆಣ್ಣು ಮಕ್ಕಳನ್ನು ಉತ್ತೇಜಿಸಲು ಅಜೀಂ ಪ್ರೇಮ್ ಜಿ ಫೌಂಡೇಶನ್ ಕರ್ನಾಟಕ ಸೇರಿದಂತೆ 18 ರಾಜ್ಯಗಳಲ್ಲಿ 2025- 26 ನೇ ಸಾಲಿನಲ್ಲಿ ಪದವಿ, ಡಿಪ್ಲೋಮಾ ಗೆ ಪ್ರವೇಶ ಪಡೆಯುವ 2.5 ಲಕ್ಷ ವಿದ್ಯಾರ್ಥಿನಿಯರಿಗೆ ವ್ಯಾಸಂಗದ ಅವಧಿಯಲ್ಲಿ ಪ್ರತಿ ವರ್ಷ ತಲಾ 30,000 ರೂ. ಸ್ಕಾಲರ್ಶಿಪ್ ನೀಡುತ್ತಾರೆ.

10 ನೇ ಮತ್ತು 12ನೇ ತರಗತಿ ಉತ್ತೀರ್ಣರಾಗಿ ಉನ್ನತ ಶಿಕ್ಷಣ ಪಡೆಯುವ ಹೆಣ್ಣು ಮಕ್ಕಳಿಗೆ ಈ ವಿದ್ಯಾರ್ಥಿವೇತನದ ನೆರವು ದೊರೆಯಲಿದೆ. ಪ್ರಸ್ತುತ ಸರ್ಕಾರಿ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ/ ಡಿಪ್ಲೋಮಾ ವ್ಯಾಸಂಗಕ್ಕೆ ಪ್ರವೇಶ ಪಡೆದಿರುವ ಹೆಣ್ಣು ಮಕ್ಕಳು ಅರ್ಜಿಯನ್ನು ಸಲ್ಲಿಸಬಹುದು.

ಈ ಕೆಳಗಿನ ರಾಜ್ಯದವರು ಅರ್ಜಿ ಸಲ್ಲಿಸಬಹುದು.
ಕರ್ನಾಟಕ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಡ, ಜಾರ್ಖಂಡ್, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ಒಡಿಶಾ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತೆಲಂಗಾಣ, ತ್ರಿಪುರಾ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಹೆಣ್ಣು ಮಕ್ಕಳು‌ ಅರ್ಜಿ ಸಲ್ಲಿಸಬಹುದು.

Azim Premji Scholarship 2025 ಅಗತ್ಯ ದಾಖಲೆಗಳು:

  • ಪಾಸ್‌ಪೋರ್ಟ್ ಸೈಜ್ ಪೋಟೋ
  • ಆಧಾರ್ ಕಾರ್ಡ್
  • Bank account details (any one):
  • Passbook, or Account statement of the last one month
  • 10th original marksheet
  • 12th original marksheet
  • Proof of admission (any one).
  • Bona fide Certificate, or Tuition Fee Receipt

ಅರ್ಜಿ ಸಲ್ಲಿಕೆ ದಿನಾಂಕ:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10-09-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 30-09-2025

Azim Premji Deepika Scholarship 2025 ಪ್ರಮುಖ ಲಿಂಕ್ ಗಳು:
ಅಧಿಸೂಚನೆ: ಡೌನ್‌ಲೋಡ್
ಅರ್ಜಿ ಸಲ್ಲಿಕೆ ಲಿಂಕ್:‌ ಅರ್ಜಿ ಸಲ್ಲಿಸಿ
ಅಧಿಕೃತ ವೆಬ್‌ಸೈಟ್‌: azimpremjifoundation.org

CIBIL Score: ಗುಡ್‌ ನ್ಯೂಸ್; ಸಿಬಿಲ್ ಸ್ಕೋರ್ ಇಲ್ಲದೆಯೂ ಸಾಲ ಪಡೆಯಬಹುದು

LIC ವಿದ್ಯಾರ್ಥಿವೇತನ 2025

Telegram Group Join Now
WhatsApp Group Join Now

Leave a Comment