ಬೆಂಗಳೂರು: ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯು ಬೆಂಗಳೂರು–ಬೆಳಗಾವಿ–ಮೈಸೂರು ನಡುವೆ ವಿಶೇಷ ರೈಲುಗಳನ್ನು (Dasara Special Trains) ಓಡಿಸಲು ನಿರ್ಧರಿಸಿದೆ. ಸೆಪ್ಟೆಂಬರ್ 30ರಿಂದ ಅಕ್ಟೋಬರ್ 5ರವರೆಗೆ ಈ ವಿಶೇಷ ರೈಲುಗಳು ಸಂಚರಿಸಲಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡೆಯಬಹುದು.
ಈ ವಿಶೇಷ ರೈಲುಗಳು ತುಮಕೂರು, ದಾವಣಗೆರೆ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳ ಮೂಲಕ ಸಂಚರಿಸುವುದರಿಂದ ಹಬ್ಬದ ಪ್ರಯಾಣಿಕರಿಗೆ ಬಹಳ ಅನುಕೂಲವಾಗಲಿದೆ.
ವಿಶೇಷ ರೈಲುಗಳ ವೇಳಾಪಟ್ಟಿ ಮತ್ತು ಮಾರ್ಗಗಳು:
ರೈಲು ಸಂಖ್ಯೆ 06271/06272 — ಬೆಂಗಳೂರು–ಬೆಳಗಾವಿ–ಮೈಸೂರು ಎಕ್ಸ್ಪ್ರೆಸ್ (1 ಟ್ರಿಪ್)
- 06271: ಸೆಪ್ಟೆಂಬರ್ 30ರಂದು ಸಂಜೆ 7 ಕ್ಕೆ ಎಸ್ಎಂವಿಟಿ ಬೆಂಗಳೂರು ನಿಂದ ಹೊರಟು, ಅಕ್ಟೋಬರ್ 1ರಂದು ಬೆಳಿಗ್ಗೆ 7.30ಕ್ಕೆ ಬೆಳಗಾವಿ ತಲುಪಲಿದೆ.
- ನಿಲ್ದಾಣಗಳು: ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ.
- 06272: ಅಕ್ಟೋಬರ್ 1ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು, ಅಕ್ಟೋಬರ್ 2ರಂದು ಬೆಳಿಗ್ಗೆ 7.45ಕ್ಕೆ ಮೈಸೂರು ತಲುಪಲಿದೆ.
- ನಿಲ್ದಾಣಗಳು: ಖಾನಾಪುರ, ಲೋಂಡಾ, ಅಳ್ನಾವರ, ಧಾರವಾಡ, ಹುಬ್ಬಳ್ಳಿ, ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಚಿಕ್ಕಬಾಣಾವರ, ಯಶವಂತಪುರ, ಕೆಎಸ್ಆರ್ ಬೆಂಗಳೂರು, ಮಂಡ್ಯ.
ರೈಲು ಸಂಖ್ಯೆ 06273/06274 — ಮೈಸೂರು–ಬೆಳಗಾವಿ–ಬೆಂಗಳೂರು ಎಕ್ಸ್ಪ್ರೆಸ್ (1 ಟ್ರಿಪ್)
- 06273: ಅಕ್ಟೋಬರ್ 2ರಂದು ರಾತ್ರಿ 11.45ಕ್ಕೆ ಮೈಸೂರು ನಿಂದ ಹೊರಟು, ಅಕ್ಟೋಬರ್ 3ರಂದು ಮಧ್ಯಾಹ್ನ 12.30ಕ್ಕೆ ಬೆಳಗಾವಿ ತಲುಪಲಿದೆ.
- ನಿಲ್ದಾಣಗಳು: ಮಂಡ್ಯ, ಕೆಎಸ್ಆರ್ ಬೆಂಗಳೂರು, ಯಶವಂತಪುರ, ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ.
- 06274: ಅಕ್ಟೋಬರ್ 3ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು, ಅಕ್ಟೋಬರ್ 4ರಂದು ಬೆಳಿಗ್ಗೆ 5.00ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
- ನಿಲ್ದಾಣಗಳು: ಖಾನಾಪುರ, ಲೋಂಡಾ, ಅಳ್ನಾವರ, ಧಾರವಾಡ, ಹುಬ್ಬಳ್ಳಿ, ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಚಿಕ್ಕಬಾಣಾವರ.
ರೈಲು ಸಂಖ್ಯೆ 06275/06276 — ಬೆಂಗಳೂರು–ಬೆಳಗಾವಿ–ಬೆಂಗಳೂರು ವಿಶೇಷ ಎಕ್ಸ್ಪ್ರೆಸ್ (1 ಟ್ರಿಪ್)
- 06275: ಅಕ್ಟೋಬರ್ 4ರಂದು ಸಂಜೆ 7.00ಕ್ಕೆ ಎಸ್ಎಂವಿಟಿ ಬೆಂಗಳೂರು ನಿಂದ ಹೊರಟು, ಅಕ್ಟೋಬರ್ 5ರಂದು ಬೆಳಿಗ್ಗೆ 8.25ಕ್ಕೆ ಬೆಳಗಾವಿ ತಲುಪಲಿದೆ.
- 06276: ಅಕ್ಟೋಬರ್ 5ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು, ಅಕ್ಟೋಬರ್ 6ರಂದು ಬೆಳಿಗ್ಗೆ 5.00ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
- ಎರಡೂ ದಿಕ್ಕಿನ ನಿಲ್ದಾಣಗಳು: ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ.
ಎಷ್ಟು ಬೋಗಿಗಳು ಇವೆ?
ಈ ಎಲ್ಲಾ ವಿಶೇಷ ರೈಲುಗಳು ಒಟ್ಟು 19 ಬೋಗಿಗಳನ್ನೊಳಗೊಂಡಿವೆ:
- 1 ಎಸಿ 2-ಟೈರ್
- 3 ಎಸಿ 3-ಟೈರ್
- 10 ಸ್ಲೀಪರ್ ಕ್ಲಾಸ್
- 3 ಜನರಲ್ ಸೆಕೆಂಡ್ ಕ್ಲಾಸ್
- 2 ಎಸ್ಎಲ್ಆರ್/ಡಿ ಬೋಗಿಗಳು
ಮಾಹಿತಿ: ಹೆಚ್ಚಿನ ಮಾಹಿತಿಗಾಗಿ ಭಾರತೀಯ ರೈಲ್ವೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಿ ಅಥವಾ ಹತ್ತಿರದ ರೈಲು ನಿಲ್ದಾಣದಲ್ಲಿ ಮಾಹಿತಿ ಪಡೆಯಬಹುದು.