Gruhalakshmi Scheme: ಗೃಹಲಕ್ಷ್ಮಿ ಯೋಜನೆಗೆ 2 ವರ್ಷಗಳ ಸಂಭ್ರಮ; ₹50,000 ಕೋಟಿಗೂ ಅಧಿಕ ಹಣ ಗೃಹಲಕ್ಷ್ಮಿಯರಿಗೆ ಜಮಾ

By: ವಿಜಯಲಕ್ಷ್ಮೀ ಪೂಜಾರಿ

On: Monday, September 1, 2025 9:30 PM

Gruhalakshmi Scheme Completes 2 Years
Google News
Follow Us
Telegram Group Join Now
WhatsApp Group Join Now

ಬೆಂಗಳೂರು: ಕರ್ನಾಟಕ ಸರ್ಕಾರದ ಮಹಿಳಾ ಸಬಲೀಕರಣದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಎರಡು ವರ್ಷಗಳ ಸಂಭ್ರಮ. ಈ ಅವಧಿಯಲ್ಲಿ ಕೋಟ್ಯಾಂತರ ಕುಟುಂಬಗಳಿಗೆ ಆರ್ಥಿಕ ನೆರವು ತಲುಪಿದ್ದು, ರಾಜ್ಯದ ಮಹಿಳೆಯರಿಗೆ ಸ್ವಾವಲಂಬನೆ ಮತ್ತು ಆರ್ಥಿಕ ಭದ್ರತೆಗೆ ಸಹಕಾರಿಯಾಗಿದೆ.

ಗೃಹಲಕ್ಷ್ಮಿ ಯೋಜನೆಗೆ 2 ವರ್ಷ ಪೂರೈಸಿದ್ದು, ಈ ಅವಧಿಯಲ್ಲಿ ಪ್ರತಿ ತಿಂಗಳು 1.24 ಕೋಟಿ ಮಹಿಳೆಯರು ₹2000 ಆರ್ಥಿಕ ನೆರವು ಪಡೆಯುತ್ತಿದ್ದಾರೆ. ಈವರೆಗೆ ಫಲಾನುಭವಿಗಳ ಖಾತೆಗೆ ₹50,000 ಕೋಟಿ ರೂಪಾಯಿ ನೇರವಾಗಿ ಜಮೆ ಮಾಡಲಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ರಾಜ್ಯದ 1 ಕೋಟಿ 24 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ನೇರವಾಗಿ ₹50,000 ಕೋಟಿ ರೂ. ಮೀರಿದ ಮೊತ್ತವನ್ನು ಜಮೆ ಮಾಡಲಾಗಿದೆ. ಪ್ರತೀ ತಿಂಗಳು ₹2000 ನೆರವು ಮಹಿಳಾ ಮುಖ್ಯಸ್ಥೆಯರ ಕೈಗೆ ತಲುಪುತ್ತಿರುವುದು ಆರ್ಥಿಕ ಸ್ವಾವಲಂಬನೆಗೆ ಅನುಕೂಲವಾಗಿದೆ.

ಮಹಿಳಾ ಸಬಲೀಕರಣ ಹಾಗೂ ಬೆಲೆ ಏರಿಕೆಗೆ ಪರಿಹಾರವಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ರಾಜ್ಯದ ಕೋಟ್ಯಾಂತರ ಕುಟುಂಬಗಳಿಗೆ ಆರ್ಥಿಕ ಚೈತನ್ಯ ತುಂಬಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೇವಲ ಪ್ರಚಾರದ ತಂತ್ರಗಳಲ್ಲ, ಜನರ ಬದುಕಿನ ಜೀವನಾಡಿಯು ಹೌದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Gruhalakshmi Scheme 2025 ಪ್ರಮುಖ ಅಂಶಗಳು:

  • ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು ₹2000 ಹಣಕಾಸು ಸಹಾಯ.
  • ಎರಡು ವರ್ಷಗಳಲ್ಲಿ ₹50,000 ಕೋಟಿ ರೂ. ಅಧಿಕ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ.
  • 1 ಕೋಟಿ 24 ಲಕ್ಷಕ್ಕೂ ಹೆಚ್ಚು ಮಹಿಳೆಯರು ನೇರ ಪ್ರಯೋಜನ ಪಡೆದಿದ್ದಾರೆ.
  • ವಾರ್ಷಿಕ ಬಜೆಟ್‌ನಲ್ಲಿ 28 ಸಾವಿರ ಕೋಟಿ ರೂಪಾಯಿ ಮೀಸಲು

ಗೃಹಲಕ್ಷ್ಮಿ ಯೋಜನೆಯ ಪ್ರಭಾವ:

ಈ ಯೋಜನೆ ಮಹಿಳೆಯರ ಕೈಗೆ ನೇರ ಹಣ ತಲುಪುವ ಮೂಲಕ, ಅವರ ಖರ್ಚು ಸಾಮರ್ಥ್ಯವನ್ನು ಹೆಚ್ಚಿಸಿದೆ. ಮಕ್ಕಳ ಶಿಕ್ಷಣ, ಆರೋಗ್ಯ ವೆಚ್ಚ ಹಾಗೂ ದಿನನಿತ್ಯದ ಅಗತ್ಯಗಳಲ್ಲಿ ಈ ಹಣ ನೆರವಾಗುತ್ತಿರುವುದು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿಯೂ ದೊಡ್ಡ ಬದಲಾವಣೆ ತಂದುಕೊಟ್ಟಿದೆ.

CIBIL Score: ಗುಡ್‌ ನ್ಯೂಸ್; ಸಿಬಿಲ್ ಸ್ಕೋರ್ ಇಲ್ಲದೆಯೂ ಸಾಲ ಪಡೆಯಬಹುದು

PM SVANidhi Scheme: ಪಿಎಂ ಸ್ವನಿಧಿ ಯೋಜನೆ ಅವಧಿ ವಿಸ್ತರಣೆ 50,000 ರೂ.ವರೆಗೆ ಸಾಲ ಸೌಲಭ್ಯ

ಹೈನುಗಾರಿಕೆ ಮತ್ತು ಇತರೆ ಯೋಜನೆಗಳಿಗಾಗಿ 4 ಲಕ್ಷ ರೂ. ಸಹಾಯಧನ‌

Telegram Group Join Now
WhatsApp Group Join Now

Leave a Comment